ನ.12ರಂದು ಕಿನ್ಯದಲ್ಲಿ ಹುಬ್ಬುರ್ರಸೂಲ್ ಪ್ರವಚನ
Update: 2020-11-07 15:47 IST
ಮಂಗಳೂರು, ನ.7: ಎಸ್.ವೈ.ಎಸ್. ಮೀಲಾದ್ ಕ್ಯಾಂಪೇನ್ ಪ್ರಯುಕ್ತ ಎಸ್.ವೈ.ಎಸ್. ಕಿನ್ಯ ಶಾಖೆಯ ವತಿಯಿಂದ ನ.12ರಂದು ಮಗ್ರಿಬ್ ನಮಾಝ್ ಬಳಿಕ ಕಿನ್ಯ ಸಿ.ಎಚ್. ನಗರದಲ್ಲಿ ಹುಬ್ಬುರ್ರಸೂಲ್ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ.
ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಕಾರ್ಯದರ್ಶಿ ಖಾಸಿಂ ದಾರಿಮಿ ಪ್ರವಚನ ನೀಡುವರು.
ಸೈಯದ್ ಅಮೀರ್ ತಂಙಳ್, ಸೈಯದ್ ಬಾತಿಷ್ ತಂಙಳ್, ಫತ್ತಾಹ್ ಫೈಝಿ, ತಬೂಖ್ ದಾರಿಮಿ, ಕೆ.ಸಿ.ಇಸ್ಮಾಯೀಲ್ ಹಾಜಿ ಹಾಗೂ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ. ಎಂದು ಪ್ರಕಟನೆ ತಿಳಿಸಿದೆ.