ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಬಂಧನ
Update: 2020-11-07 16:02 IST
ಕಾಸರಗೋಡು, ನ.7: ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್‌ರನ್ನು ವಿಶೇಷ ತನಿಖಾ ತಂಡ ಶನಿವಾರ ಬಂಧಿಸಿದೆ.
ಎಂ.ಸಿ.ಕಮರುದ್ದೀನ್‌ರನ್ನು ಇಂದು ಪಿ.ವಿವೇಕ್ ಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡವು ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ವಿಚಾರಣೆ ನಡೆಸಿತ್ತು.
ತನಿಖಾ ತಂಡಕ್ಕೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿಗಳು ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಕಮರುದ್ದೀನ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಫ್ಯಾಶನ್ ಗೋಲ್ಡ್ ಇಂಟರ್‌ನ್ಯಾಷನಲ್ ಕಂಪೆನಿ ಹೆಸರಿನಲ್ಲಿ ಸುಮಾರು 130 ಕೋಟಿ ರೂ.ಗಳಷ್ಟು ವಂಚನೆ ನಡೆದಿದ್ದು, ಸುಮಾರು 700 ಮಂದಿಯಿಂದ ಠೇವಣಿ ಪಡೆಯಲಾಗಿದೆ. ಈ ಪೈಕಿ 109 ಪ್ರಕರಣಗಳು ಈಗಾಗಲೇ ದಾಖಲಾಗಿದ್ದು, 15 ಕೋಟಿ ರೂ . ಗಳ ವಂಚನೆ ನಡೆದಿರುವುದು ಹೇಳಲಾಗಿದೆ.