×
Ad

ಎಸ್‌ಎಂವಿಐಟಿಎಂ ವಿದ್ಯಾರ್ಥಿಗಳ 6 ಪ್ರಾಜೆಕ್ಟ್ ‘ಅನ್ವೇಷಣಾ’ಗೆ ಆಯ್ಕೆ

Update: 2020-11-07 17:55 IST

ಉಡುಪಿ, ನ.7: ಕರ್ನಾಟಕ ಸರಕಾರ ಮತ್ತು ಅಗಸ್ಥ್ಯ ಇಂಟರ್ನ್ಯಾಷನಲ್ ಫೌಂಡೇಶನ್ ಜಂಟಿಯಾಗಿ ಆಯೋಜಿಸಿರುವ ‘ಅನ್ವೇಷಣಾ -2021’ ರಾಜ್ಯ ಮಟ್ಟದ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಬಂಟಕಲ್ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಆರು ಪ್ರಾಜೆಕ್ಟ್‌ಗಳು ಸೆಮಿಫೈನಲ್‌ಗೆ ಆಯ್ಕೆಗೊಂಡಿವೆ.

ಇದು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಡೆಸುವ ಸ್ಪರ್ಧೆಯಾಗಿದ್ದು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ದಿ ಹೊಂದುತ್ತಿ ರುವ ಶಾಲೆಯ ವಿದ್ಯಾರ್ಥಿಗಳ ಜೊತೆಗೂಡಿ ಮಾಡುವ ಯೋಜನೆಯಾಗಿದೆ. ಇಲ್ಲಿ ವಿದ್ಯಾರ್ಥಿಗಳು ಒಟ್ಟಾಗಿ ತಾಂತ್ರಿಕತೆ-ವಿಜ್ಞಾನ ಪರಿಕಲ್ಪನೆಯ ಆಧಾರದ ಮೇಲೆ ಮಾದರಿಗಳನ್ನು ತಯಾರಿಸಲು ಕಲಿಕೆ, ಸಂಶೋಧನೆ ದೃಷ್ಟಿಕೋನ, ತತ್ವಚಿಂತನೆಗಳು ಮತ್ತು ಅಭ್ಯಾಸಗಳನ್ನು ಅನುಸರಿಸುತ್ತಾರೆ.

ಕರ್ನಾಟಕದ ವಿವಿಧ ಭಾಗಗಳಿಂದ ಆಯ್ಕೆ ಮಾಡಲ್ಪಟ್ಟ ಪ್ರಾಜೆಕ್ಟ್‌ಗಳಲ್ಲಿ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಗಳು ಮಾಡಿದ 6 ಪ್ರಾಜೆಕ್ಟ್‌ಗಳು ಆಯ್ಕೆಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News