×
Ad

​ಮಂಗಳೂರು ಸಹಾಯಕ ಆಯುಕ್ತರಾಗಿ ಮದನ್ ಮೋಹನ್ ಮರು ನೇಮಕ

Update: 2020-11-07 18:06 IST

ಮಂಗಳೂರು, ನ.7: ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ಮದನ್ ಮೋಹನ್ ಅವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಾಜ್ಯ ಸರಕಾರ ಮರು ನೇಮಕಗೊಳಿಸಿ ಆದೇಶಿಸಿದೆ.

ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅ.13ರಂದು ಮದನ್ ಮೋಹನ್ ಅವರನ್ನು (ಸ್ಥಳ ಗೊತ್ತುಪಡಿಸದೆ) ವರ್ಗಾವಣೆಗೊಳಿಸಿತ್ತು. ಅವರ ಸ್ಥಾನಕ್ಕೆ ಮಂಗಳೂರು ಸ್ಮಾರ್ಟ್ ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರವಿಚಂದ್ರ ನಾಯಕ್ ಅವರನ್ನು ಮಂಗಳೂರು ಉಪವಿಭಾಗಾಧಿಕಾರಿಯನ್ನಾಗಿ ನಿಯುಕ್ತಿಗೊಳಿಸಿ ಆದೇಶ ಮಾಡಿತ್ತು. ಆದರೆ ಈ ಪ್ರಕರಣ ಕರ್ನಾಟಕ ಆಡಳಿತ ನ್ಯಾಯಮಂಡಳಿ ಕೋರ್ಟ್‌ನಲ್ಲಿ ತಿರಸ್ಕೃತಗೊಂಡ ಕಾರಣ ರಾಜ್ಯ ಸರಕಾರ ಮತ್ತೆ ಮದನ್ ಮೋಹನ್ ಸಿ. ಅವರನ್ನು ಮಂಗಳೂರು ಉಪವಿಭಾಗಾಧಿಕಾರಿಯನ್ನಾಗಿ ನೇಮಿಸಿ ನ.6ರಂದು ಆದೇಶ ಮಾಡಿದೆ.

ಮುಡಿಪು ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿದ್ದ ರೆಡ್ ಬಾಕ್ಸೈಟ್ ದಂಧೆಯ ಬಗ್ಗೆ ಮಾಹಿತಿ ಪಡೆದಿದ್ದ ಮದನ್ ಮೋಹನ್ ಸಿ. ನೇತೃತ್ವದ ತಂಡ ದಾಳಿ ನಡೆಸಿ 30 ಲಾರಿ, ಹಿಟಾಚಿ, ಜೆಸಿಬಿಗಳನ್ನು ವಶಪಡಿಸಿಕೊಂಡಿತ್ತು. ರೆಡ್ ಬಾಕ್ಸೈಟ್ ದಂಧೆಯಲ್ಲಿ ಕೆಲವು ಸ್ಥಳೀಯ ಜನಪ್ರತಿನಿಧಿ ಗಳು ಭಾಗಿಯಾಗಿದ್ದು, ಈ ದಾಳಿ ಪ್ರಭಾವಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ದಾಳಿ ನಡೆದ ಕೆಲವೇ ದಿನದಲ್ಲಿ ಮದನ್ ಮೋಹನ್ ಅವರ ವರ್ಗಾವಣೆಗೊಳಿಸಲಾಗಿತ್ತು. ಇದು ಹಲವು ಮಂದಿಯ ಅಕ್ರೋಶಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News