ಹಾಜಿ ಮುಹಮ್ಮದ್ ಕೋಡಿಜಾಲ್ ನಿಧನ
Update: 2020-11-07 18:12 IST
ಮಂಗಳೂರು, ನ.7: ಕೊಣಾಜೆ ಸಮೀಪದ ಕೋಡಿಜಾಲ್ ನಿವಾಸಿ ಹಾಜಿ ಮುಹಮ್ಮದ್ ಕೋಡಿಜಾಲ್ (65) ಶನಿವಾರ ಅಪರಾಹ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ‘ವಾರ್ತಾಭಾರತಿ’ ದೈನಿಕದ ಉದ್ಯೋಗಿ ಶರೀಫ್ ಕೋಡಿಜಾಲ್ ಸಹಿತ ನಾಲ್ವರು ಪುತ್ರರು ಮತ್ತು ಒಬ್ಬರು ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕೃಷಿಕರಾಗಿದ್ದ ಅವರು ಕೋಡಿಜಾಲ್ ರಿಫಾಈ ಜುಮಾ ಮಸ್ಜಿದ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರ ದಫನ ಕ್ರಿಯೆಯು ಕೋಡಿಜಾಲ್ ಜುಮಾ ಮಸ್ಜಿದ್ ಆವರಣದಲ್ಲಿ ಶನಿವಾರ ರಾತ್ರಿಯ ಸುಮಾರಿಗೆ ನಡೆಯಲಿದೆ.