×
Ad

ಫ್ಯಾಸಿಸ್ಟ್ ಶಕ್ತಿಯನ್ನು ದೂರ ಇಡಲು ಕಾಂಗ್ರೆಸ್ ಗೆ ಬೆಂಬಲ : ಮುನೀಶ್ ಅಲಿ

Update: 2020-11-07 20:13 IST

ಬಂಟ್ವಾಳ, ನ.7: ಕೋಮುವಾದಿ ಫ್ಯಾಸಿಸ್ಟ್ ಶಕ್ತಿಯನ್ನು ಅಧಿಕಾರದಿಂದ ದೂರ ಇಡಲು ನಾವು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದೇವೆ ಎಂದು ಎಸ್.ಡಿ.ಪಿ.ಐ. ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ ಹೇಳಿದರು‌.

ಶನಿವಾರ ಬಂಟ್ವಾಳ ಪುರಸಭೆಯ ‌ಅಧ್ಯಕ್ಷ, ಉಪಾಧ್ಯಕ್ಷೆ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಫ್ಯಾಸಿಸ್ಟ್ ಶಕ್ತಿಯನ್ನು ಅಧಿಕಾರದಿಂದ ದೂರ ಇಡಲು ನಾವು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದೇವೆ. ಹಾಗಂತ ಪುರಸಭೆಯ ಎಲ್ಲಾ ಹಾಗು ಹೋಗುಗಳಿಗೆ ಬೆಂಬಲ ನೀಡುತ್ತೇವೆ ಎಂದು ಅರ್ಥವಲ್ಲ. ಸಾಂದರ್ಭಿಕವಾಗಿ ಯಾವುದನ್ನು ವಿರೋಧಿಸಬೇಕು ಅದನ್ನು ನಾವು ವಿರೋಧಿಸು ತ್ತೇವೆ, ಯಾವುದನ್ನು ಬೆಂಬಲಿಸಬೇಕು ಅದನ್ನು ನಾವು ಬೆಂಬಲಿಸುತ್ತೇವೆ ಎಂದು ಹೇಳಿದರು.

ಚುನಾವಣಾ ಅಧಿಕಾರಿಗೆ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದು ನಾವು ನೀಡಿರುವ ಬೆಂಬಲವನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು ಮತ್ತು ಭ್ರಷ್ಟಾಚಾರ ರಹಿತ ಆಡಳಿತ ಮಾಡಬೇಕು ಎಂದು ಅವರು ಸಲಹೆ ನೀಡಿದರು.

"ಕಾಂಗ್ರೆಸ್ ಗೆ ಬೆಂಬಲ ನೀಡಿರುವುದನ್ನು ಎಸ್.ಡಿ.ಪಿ.ಐ. ಕಾರ್ಯಕರ್ತರು ಒಪ್ಪುತ್ತಾರಾ ?" ಎಂಬ ಮಾಧ್ಯಮದವರ ಪ್ರಶ್ನೆಗೆ, ನಮ್ಮ ಕಾರ್ಯಕರ್ತರು ನಮ್ಮ ವಿಚಾರ. ಅವರನ್ನು ನಾವು ಒಪ್ಪಿಸುತ್ತೇವೆ ಎಂದು ಉತ್ತರಿಸಿದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News