ಎನ್‌ಡಿಟಿವಿಗೆ ಇಂಡಿಯನ್ ಟೆಲಿವಿಷನ್ ಡಾಟ್ ಕಾಂನ 11 ಪ್ರಶಸ್ತಿ

Update: 2020-11-07 17:57 GMT

ಹೊಸದಿಲ್ಲಿ, ನ. 7: ಎನ್‌ಡಿಟಿವಿ ಈ ಬಾರಿ ಇಂಡಸ್ಟ್ರಿ ಅಸೋಶಿಯೇಶನ್ ಇಂಡಿಯನ್ ಟೆಲಿವಿಶನ್ ಡಾಟ್ ಕಾಮ್ ಕೊಡ ಮಾಡುವ 11 ‘ನ್ಯೂಸ್ ಟೆಲಿವಿಷನ್ ಅವಾರ್ಡ್’ಗೆ ಪಾತ್ರವಾಗಿದೆ. ಇದರೊಂದಿಗೆ ಎನ್‌ಡಿಟಿವಿ ಮತ್ತೊಮ್ಮೆ ಗುಣಮಟ್ಟದ ಪತ್ರಿಕೋದ್ಯಮದಲ್ಲಿ ನಂಬರ್ 1 ಎಂಬುದನ್ನು ಸಾಬೀತುಪಡಿಸಿದೆ. ಆರ್ಥಿಕತೆಯ ಸ್ಥಿತಿಗತಿ ಹಾಗೂ ಸಾಂಕ್ರಾಮಿಕ ರೋಗದ ಪರಿಣಾಮದ ಕುರಿತ ವಿವರ ನೀಡುವ ಕಾರ್ಯಕ್ರಮಕ್ಕಾಗಿ ಎನ್‌ಡಿಟಿವಿಯ ಸಹ ಸಂಸ್ಥಾಪಕ ಪ್ರಣಯ್ ರಾಯ್ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ರವೀಶ್ ಕುಮಾರ್ ಅವರು ತಮ್ಮ ಎರಡು ದೈನಂದಿನ ಪ್ರದರ್ಶನ ದೇಶ್ ಕಿ ಬಾತ್ (ಹಿಂದಿಯಲ್ಲಿ ಅತ್ಯುತ್ತಮ ದಿನಂಪ್ರತಿ ನ್ಯೂಸ್ ಬುಲೆಟಿನ್) ಹಾಗೂ ಪ್ರೈಮ್ ಟೈಮ್ (ಹಿಂದಿಯಲ್ಲಿ ಅತ್ಯುತ್ತಮ ಪ್ರೈಮ್‌ಟೈಮ್ ನ್ಯೂಸ್ ಪ್ರದರ್ಶನ)ಗೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅತ್ಯುತ್ತಮ ‘ನ್ಯೂಸ್ ಡಾಕ್ಯುಮೆಂಟರಿ ಲಿಮಿಟೆಡ್ ಎಪಿಸೋಡ್ಸ್’ ಪ್ರಶಸ್ತಿಗೆ ಶ್ರೀನಿವಾಸ್ ಜೈನ್, ಹಿಂದಿಯಲ್ಲಿ ಅತ್ಯುತ್ತಮ ‘ನ್ಯೂಸ್ ಡಿಬೇಟ್ ಶೋ’ ಪ್ರಶಸ್ತಿಗೆ ಸಂಕೇತ್ ಉಪಾದ್ಯಾಯ ಆಯ್ಕೆಯಾಗಿದ್ದಾರೆ. ಗುಣಮಟ್ಟದ ಪತ್ರಿಕೋದ್ಯಮದ ಇನ್ನೆರೆಡು ಪ್ರಶಸ್ತಿಗಳಿಗೆ ಸೋಹಿತ್ ಮಿಶ್ರಾ ಹಾಗೂ ನಝೀರ್ ಮಸೂದಿ ಪಾತ್ರರಾಗಿದ್ದಾರೆ. ಇದಲ್ಲದೆ, ಲೈವ್ ಟೆಲಿಥಾನ್ ಬನೇಗಾ ಸ್ವಸ್ಥ್ ಇಂಡಿಯಾ ಸೀಸನ್ 6 ‘ಟೆಲಿವೈಸ್‌ಡ್ ಲೈವ್ ಇನಿಷಿಯೇಟಿವ್’ (ಇಂಗ್ಲಿಷ್)ಪ್ರಶಸ್ತಿಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News