​ನ.8: ಎಸ್ಕೆಎಸ್ಸೆಸ್ಸೆಫ್‌ನಿಂದ ಜಶ್ನೇ ಮದೀನ ಕಾರ್ಯಕ್ರಮ

Update: 2020-11-07 17:00 GMT

ಮಂಗಳೂರು, ನ.7: ಎಸ್ಕೆಎಸ್ಸೆಸ್ಸೆಫ್ ಕಿನ್ಯ ಶಾಖೆಯಿಂದ ಜಶ್ನೇ ಮದೀನ ಕಾರ್ಯಕ್ರಮವು ನ.8ರಂದು ಮಗ್ರಿಬ್ ನಮಾಝ್ ಬಳಿಕ ಕಿನ್ಯದ ಸಿ.ಎಚ್.ನಗರದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಸೈಯದ್ ಅಮೀರ್ ತಂಙಳ್ ಅಲ್ ಬುಖಾರಿ ಕಿನ್ಯ ದುಆ ನೆರವೇರಿಸಲಿದ್ದಾರೆ. ದಾರುಸ್ಸಲಾಂ ವಾಫಿ ಕಾಲೇಜು ವಾದಿತ್ವಯ್ಬ ಕಿನ್ಯ ಪ್ರಾಂಶುಪಾಲ ಅಪ್ಸಲ್ ವಾಫಿ ಕೇರಳ ಮುಖ್ಯ ಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಸೈಯದ್ ಬಾತಿಷ್ ತಂಙಳ್ ಅಲ್ ಅಝ್ಝರಿ ಕಿನ್ಯ, ಫಾರೂಕ್ ದಾರಿಮಿ ಗ್ರಾಮಚಾವಡಿ, ಫತ್ತಾಹ್ ಪೈಝಿ ಕಿನ್ಯ, ಎಸ್ಕೆಎಸ್ಸೆಸ್ಸೆಫ್ ಮಂಜನಾಡಿ ಕ್ಲಸ್ಟರ್ ಅಧ್ಯಕ್ಷ ಹಸೈನಾರ್ ಉರುಮಣೆ, ಅಬ್ದುಲ್ ರಝಾಕ್ ದೊಡ್ಡಮನೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಎಸ್ಕೆಎಸ್ಸೆಸ್ಸೆಫ್ ಕಿನ್ಯ ಶಾಖೆಯ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಕಿನ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News