×
Ad

ಸ್ವಚ್ಛ-ಸುಂದರ ಶೌಚಾಲಯ: ವಿಜೇತರಿಗೆ ಪ್ರಶಸ್ತಿ ಪ್ರದಾನ

Update: 2020-11-07 22:40 IST

 ಮಂಗಳೂರು, ನ.7: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಜಿಪಂ, ಸ್ವಚ್ಛ ಭಾರತ್ ಮಿಷನ್‌ಗಳ ಸಂಯುಕ್ತಾಶ್ರಯದಲ್ಲಿ ಸಮುದಾಯ ಶೌಚಾಲಯ ಅಭಿಯಾನದ ಅಂಗವಾಗಿ ಆಯೋಜಿಸಲಾದ ಜಿಲ್ಲಾ ಮಟ್ಟದ ‘ಸ್ವಚ್ಛ-ಸುಂದರ ಶೌಚಾಲಯ’ ಸ್ಪರ್ಧೆಯಲ್ಲಿ ವಿವಿಧ ತಾಲೂಕಿನ ಶೌಚಾಲಯಗಳು ಆಯ್ಕೆಯಾಗಿವೆ.

ಸ್ಫರ್ಧೆಯಲ್ಲಿ ಬಂಟ್ವಾಳ ತಾಲೂಕಿನ ಕೊಳ್ನಾಡು, ಬೆಳ್ತಂಗಡಿ ತಾಲೂಕಿನ ಮಡಂತ್ಯಾರು, ಮಂಗಳೂರು ತಾಲೂಕಿನ ಕಿನ್ನಿಗೋಳಿ, ಪುತ್ತೂರು ತಾಲೂಕಿನ ಒಳಮೊಗ್ರು, ಕಡಬ ತಾಲೂಕಿನ ಕುಟ್ರುಪಾಡಿ, ಸುಳ್ಯ ತಾಲೂಕಿನ ಐವರ್ನಾಡು ಹಾಗೂ ಮೂಡುಬಿದಿರೆ ತಾಲೂಕಿನ ಕಲ್ಲಮುಂಡ್ಕೂರು ಸಾರ್ವಜನಿಕ ಶೌಚಾಲಯಗಳು ಆಯ್ಕೆಯಾಗಿವೆ.

ನ.12ರಂದು ಮೂಡುಬಿದಿರೆ ತಾಲೂಕಿನ ಪುತ್ತಿಗೆ ಸ್ವಚ್ಛ ಸಂಕೀರ್ಣದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಜಿಲ್ಲಾ ನೋಡಲ್ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News