ಅಮೆಮ್ಮಾರ್ ಮಸೀದಿ : ಮಾದಕ ವ್ಯಸನ ವಿರೋಧಿ ಅಭಿಯಾನ
ಫರಂಗಿಪೇಟೆ : ಬದ್ರಿಯಾ ಮದರಸ ಮತ್ತು ಜುಮ್ಮಾ ಮಸೀದಿ ಅಮೆಮ್ಮಾರ್ ಇದರ ವತಿಯಿಂದ ಮಿಲಾದ್ ಸಂದೇಶದ ಅಂಗವಾಗಿ ನಮ್ಮ ನಡೆ ಒಳಿತಿನ ಕಡೆಗೆ ಎಂಬ ದ್ಯೇಯ ವಾಕ್ಯದಲ್ಲಿ ಮಾದಕ ವ್ಯಸನ ವಿರೋಧಿ ಅಭಿಯಾನದ ಜಾಗೃತಿ ಜಾಥಾ ಮತ್ತು ಸಭಾ ಕಾರ್ಯಕ್ರಮ ಅಮೆಮ್ಮಾರ್ ಮಸೀದಿ ವಠಾರದಲ್ಲಿ ಶುಕ್ರವಾರ ನಡೆಯಿತು.
ಅಮೆಮ್ಮಾರ್ ಮಸೀದಿ ಖತೀಬ್ ಅಬ್ದುಲ್ ಲತಿಫ್ ಹನೀಫಿ ದುವಾ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷ ಉಮರಬ್ಬ ಎಎಸ್ಬಿ ವಹಿಸಿದರು, ಪರ್ಲಿಯಾ ಜುಮ್ಮಾ ಮಸೀದಿ ಖತೀಬ್ ಅಷ್ಫಾಕ್ ಫೈಝಿ ಮಾದಕ ವ್ಯಸನದ ಜಾಗೃತಿಯ ಕರಪತ್ರ ಬಿಡುಗಡೆಗೊಳಿಸಿದರು.
ಬಂಟ್ವಾಳ ಗ್ರಾಮಾಂತರ ಠಾಣೆ ಎಸ್.ಐ ಪ್ರಸನ್ನ ಎಮ್.ಎಸ್, ಸಾಮಾಜಿಕ ಮುಖಂಡ ರಫೀಕ್ ಮಾಸ್ಟ್, ಪಾಪ್ಯುಲರ್ ಫ್ರಂಟ್ ಬಂಟ್ವಾಳ ತಾಲೂಕು ಸಮಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕಲ್ಲಡ್ಕ, ಸಾಮಾಜಿಕ ಮುಖಂಡ ಹನೀಫ್ ಕಾನ್ ಕೊಡಾಜೆ, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ, ನ್ಯಾಯವಾದಿ ಮೊಹಮ್ಮದ್ ಕಬೀರ್, ಯನೆಪೋಯ ಮೆಡಿಕಲ್ ಕಾಲೇಜ್ ಉಪಾನ್ಯಾಸಕ ಅನ್ವರ್ ಅಮೆಮ್ಮಾರ್ ಸೂಫಿ ಅವರು ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವ ಮಾತುಗಳನ್ನಾಡಿದರು.
ಅಮೆಮ್ಮಾರ್ ಮಸೀದಿ ಉಪಾಧ್ಯಕ್ಷ ಎಫ್.ಎ ಖಾದರ್, ಸುಜೀರ್ ಪ್ರಾಢಶಾಲೆ ನಿವೃತ ಉಪಾನ್ಯಾಸಕ ಬಿ. ಎಮ್ ಮೊಹಮ್ಮದ್, ಫರಂಗಿಪೇಟೆ ಮಸೀದಿ ಅಧ್ಯಕ್ಷ ಉಮರ್ ಫಾರೂಕು ಈ ಸಂದರ್ಭ ಉಪಸ್ಥಿತರಿದ್ದರು. ಅಮೆಮ್ಮಾರ್ ಮಸೀದಿ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ ಸ್ವಾಗತಿಸಿದರು. ಸ್ವಾಗತ ಸಮಿತಿಯ ಸದಸ್ಯ ಬಶೀರ್ ತಂಡೇಲ್ ವಂದಿಸಿದರು.