×
Ad

ಮಂಗಳೂರು ಧರ್ಮಪ್ರಾಂತ್ಯ : ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ರಾಯ್ ಕ್ಯಾಸ್ತೆಲಿನೊ ಅಧಿಕಾರ ಸ್ವೀಕಾರ

Update: 2020-11-08 17:42 IST

ಮಂಗಳೂರು, ನ. 8: ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾರ್ಸೆಲ್ ಮೊಂತೇರೊ ಅವರಿಗೆ ಬೀಳ್ಕೊಡುವ ಹಾಗೂ ಅವರ ಸ್ಥಾನಕ್ಕೆ ಎರಡನೇ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ನೂತನವಾಗಿ ನೇಮಿಸಲ್ಪಟ್ಟ ರಾಯ್ (ರೊನಾಲ್ಡ್) ಕ್ಯಾಸ್ತೆಲಿನೊ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮವು ಬಿಷಪರ ನಿವಾಸದಲ್ಲಿ ಇತ್ತೀಚೆಗೆ ನಡೆಯಿತು.

ಕಳೆದ 24 ವರ್ಷಗಳಿಂದ ಸೇವೆ ಸಲ್ಲಿಸಿದ ಮಾರ್ಸೆಲ್ ಮೊಂತೆರೊ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಪೀಟರ್ ಪಾವ್ಲ್ ಸಲ್ದಾನ್ಹಾ ಮಂಗಳೂರು ಧರ್ಮಪ್ರಾಂತದ ಶ್ರೇಷ್ಠ ಗುರು ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ ಉಪಸ್ಥಿತರಿದ್ದರು.

ಮಂಗಳೂರು ಧರ್ಮಪ್ರಾಂತದಲ್ಲಿ ಇಬ್ಬರು ಪಿಆರ್‌ಒಗಳಿದ್ದು, ಆ ಪೈಕಿ ವಂ.ವಿಕ್ಟರ್ ವಿಜಯ್ ಲೋಬೊ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ರೊನಾಲ್ಡ್ ಕ್ಯಾಸ್ಟಲಿನೊ ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡಮಿಯ ಅಧ್ಯಕ್ಷರಾಗಿ, 200ಕ್ಕಿಂತ ಅಧಿಕ ಕೊಂಕಣಿ ಕಾರ್ಯಕ್ರಮಗಳನ್ನು ನಡೆಸಿ ಗಮನ ಸೆಳೆದಿದ್ದಾರೆ. ಎರಡು ಅವಧಿಗೆ ರಚನಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News