ಶಾಲೆ ಆರಂಭಕ್ಕೆ ಕಾಲ ಪಕ್ವ ಆಗಿಲ್ಲ: ಎಸ್.ಎಲ್.ಭೋಜೇಗೌಡ

Update: 2020-11-08 15:15 GMT

ಹೆಬ್ರಿ, ನ.8: ರಾಜ್ಯದಲ್ಲಿ ಕೊರೊನಾ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ. ನರ್ಸರಿಯಿಂದ 9ನೇ ತರಗತಿಯವರೆಗೆ ಶಾಲೆ ಆರಂಭಿಸಲು ಇನ್ನೂ ಕಾಲ ಪಕ್ವ ಆಗಿಲ್ಲ. ಎಸೆಸೆಲ್ಸಿ ನಂತರದ ತರಗತಿಯನ್ನು ಸರಕಾರ ಕೋವಿಡ್ನ ಎಲ್ಲಾ ನಿಯಮ ಮತ್ತು ಮುನ್ನೆಚ್ಚರಿಕೆ ಪಾಲಿಸಿಕೊಂಡು, ಸಕಲ ಸಿದ್ಧತೆಯೊಂದಿಗೆ ಆರಂಭಿಸಬಹುದಾಗಿ ಮುಖ್ಯಮಂತ್ರಿಗೆ ತಿಳಿಸಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ಮುಖಂಡ ಎಸ್.ಎಲ್. ಭೋಜೇಗೌಡ ಹೇಳಿಸಿದ್ದಾರೆ.

ಹೆಬ್ರಿ ತಾಲೂಕಿನ ಜೆಡಿಎಸ್ ಪಕ್ಷದ ನೂತನ ಕಚೇರಿಯನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಕೊರೋನಾ ಸಂಕಷ್ಟದಿಂದ ಜನತೆ ಉದ್ಯೋಗ ಇಲ್ಲದೆ, ತುತ್ತು ಅನ್ನಕ್ಕೂ ಗತಿ ಇಲ್ಲದೆ ಪರಿತಪಿಸುತ್ತಿದ್ದಾರೆ. ಆದರೆ ರಾಜ್ಯದ ಬಿಜೆಪಿ ಸರಕಾರ ಕೊರೋನಾದ ಹೆಸರಲ್ಲೂ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ದೂರಿದರು.

ಕಾರ್ಮಿಕರು, ಮಡಿವಾಳ, ಸವಿತಾ ಸಮಾಜ, ರಿಕ್ಷಾ ಚಾಲಕರಿಗೆ ಪ್ಯಾಕೇಜ್ ನೆರವು ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿ ದ್ದಾರೆ. ಆದರೆ ಈತನಕ ಯಾರಿಗೂ ಪ್ಯಾಕೇಜ್ ತಲುಪಿಲ್ಲ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ಯೋಜನೆಗಳು ಎಲ್ಲವೂ ಕೇವಲ ಘೋಷಣೆಗೆ ಸಿಮೀತಾಗಿದೆ ಎಂದು ಅವರು ಆರೋಪಿಸಿದರು.

ಅಧ್ಯಕ್ಷತೆಯನ್ನು ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ವಹಿಸಿ ದ್ದರು. ಜೆಡಿಎಸ್ ಕಾರ್ಕಳ ಕ್ಷೇತ್ರದ ನೂತನ ಅಧ್ಯಕ್ಷ ಕುಚ್ಚೂರು ಶ್ರೀಕಾಂತ್ ಪೂಜಾರಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಹೆಬ್ರಿಯ ಜೆಡಿಎಸ್ ನೂತನ ಕಛೇರಿ ಯನ್ನು ಸ್ಥಾಪಿಸಲು ಸ್ಥಳಾವಕಾಶ ನೀಡಿದ ಬೆಂಗಳೂರಿನ ಉದ್ಯಮಿ ಸೀತಾರಾಮ ಶೆಟ್ಟಿ ಅವರ ತಂದೆ ವೀರಣ್ಣ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಜೆಡಿಎಸ್ ಉಡುಪಿ ಜಿಲ್ಲಾ ವೀಕ್ಷಕ ಸುಧಾಕರ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯ ಜಯರಾಮ ಆಚಾರ್ಯ, ವೆಂಕಟೇಶ್ ಪಡುಬಿದ್ರೆ, ರಮೇಶ್ ಕುಂದಾಪುರ, ಕಿಶೋರ್ ಬಳ್ಳಾಲ್ ಕುಂದಾಪುರ, ಇಸ್ಮಾಯಿಲ್ ಪಲಿಮಾರ್, ಪ್ರಕಾಶ ಶೆಟ್ಟಿ, ಇಕ್ಬಾಲ್ ಆತ್ರಾಡಿ, ಬಿ.ಕೆ.ಮಹಮ್ಮದ್, ಶಂಶುದ್ಧೀನ್ ಮಜೂರು ಮೊದಲಾದವರು ಉಪಸ್ಥಿತರಿದ್ದರು. ವೆಂಕಟೇಶ್ ಎಂ.ಟಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News