×
Ad

ಉತ್ಪನ್ನ ಮಾರಾಟ ಮಾಡಿದ ಹಣ ನೀಡದೆ ವಂಚನೆ: ದೂರು

Update: 2020-11-08 21:32 IST

ಕುಂದಾಪುರ, ನ.8: ಕುಂದಾಪುರ ಕೋಣಿಯಲ್ಲಿರುವ ರಾಧೇಶ್ ಪ್ಲಾಸ್ಟಿಕ್ಸ್ ಇಂಡಿಯಾ ಪ್ರೈ ಲಿಮಿಟೆಡ್ ಕಂಪೆನಿಯ ಉತ್ಪನ್ನಗಳನ್ನು ಮಾರಾಟ ಮಾಡಿ, ಅದರ ಹಣವನ್ನು ಕಂಪೆನಿಗೆ ಪಾವತಿಸದೆ ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಪೆನಿಯ ಚಿತ್ರದುರ್ಗ ಮತ್ತು ದಾವಣಗೆರೆಯ ಸೇಲ್ಸ್ ಪ್ರತಿನಿಧಿಯಾಗಿ ರುವ ಎಂ.ಬಿ.ಚನ್ನಕೇಶವ ಎಂಬವರು 2019ನೇ ವರ್ಷದ ಅಕ್ಟೋಬರ್ ತಿಂಗಳಿಂದ ಕಂಪೆನಿಯ ಉತ್ಪನ್ನಗಳಾದ ಪಿವಿಸಿ ಪೈಪ್ಸ್ ಫಿಟ್ಟಿಂಗ್ಸ್ಗಳನ್ನು ದಾವಣ ಗೆರೆ ಚಿತ್ರದುರ್ಗ ಪರಿಸರದಲ್ಲಿ ಮಾರಾಟ ಮಾಡಿದ 10,00,000ಕ್ಕೂ ಅಧಿಕ ಹಣ ವನ್ನು ಕಂಪೆನಿಗೆ ಪಾವತಿಸದೆ ವಂಚಿಸಿರುವುದಾಗಿ ಕಂಪೆನಿಯ ಕಾರ್ಯನಿರ್ವಾ ಹಕ ನಿರ್ದೇಶಕ ರಾಜೇಂದ್ರ ಕಾಮತ್ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News