ನ.11: 'ಯುನಿವೆಫ್'ನಿಂದ ಮೌಲಾನಾ ಅಬುಲ್ ಕಲಾಂ ಆಜಾದ್, ಅಲ್ಲಾಮ ಇಕ್ಬಾಲ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಮಂಗಳೂರು, ನ. 8: 2019-20ನೆ ಸಾಲಿನ ಎಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ ಆರ್ಥಿಕವಾಗಿ ಹಿಂದುಳಿದ ಮುಸ್ಲಿಮ್ ವಿದ್ಯಾರ್ಥಿಗಳಿಗೆ ನೀಡಲ್ಪಡುವ "ಯುನಿವೆಫ್ ಕರ್ನಾಟಕದ" ಪ್ರತಿಷ್ಠಿತ ಮೌಲಾನಾ ಅಬುಲ್ ಕಲಾಂ ಆಝಾದ್ ಮತ್ತು ಡಾ. ಮುಹಮ್ಮದ್ ಅಲ್ಲಾಮ ಇಕ್ಬಾಲ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನ.11 ರಂದು ಸಂಜೆ 4ಕ್ಕೆ ಕಂಕನಾಡಿಯ ಬಾಲಿಕಾಶ್ರಮ ರಸ್ತೆಯಲ್ಲಿರುವ ಜಮೀಯತುಲ್ ಫಲಾಹ್ ಹಾಲ್‌ನಲ್ಲಿ ಜರುಗಲಿದೆ.
ಅತಿ ಹೆಚ್ಚು ಅಂಕ ಗಳಿಸಿರುವ ಐವರು ವಿದ್ಯಾರ್ಥಿಗಳಿಗೆ 5,000 ರೂ. ನಗದು ಹಾಗು ಪ್ರಶಸ್ತಿಗಳ ಜತೆ ಇತರ ಕೆಲವು ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ಧನ ಮತ್ತು ಪ್ರಶಸ್ತಿಯನ್ನು ನೀಡಲಾಗುವುದು. ಈ ಪ್ರಶಸ್ತಿಯ ಹಿನ್ನೆಲೆಯಲ್ಲಿ "ನವಯುಗದ ಮಾದರಿ ರಾಜಕಾರಿಣಿ ಮೌಲಾನಾ ಅಬುಲ್ ಕಲಾಮ್ ಆಝಾದ್" ಮತ್ತು "ನಾಗರಿಕ ಸಮಾಜ ನಿರ್ಮಾಣ ಮತ್ತು ಅಲ್ಲಾಮಾ ಇಕ್ಬಾಲ್" ಎಂಬ ವಿಷಯದಲ್ಲಿ ಏರ್ಪಡಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಈ ಸಂದರ್ಭ ಸನ್ಮಾನಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಯುನಿವೆಫ್ ಕರ್ನಾಟಕ ಎಜುಕೇಶನ್ ಫೋರಂ (ಮೊ.ನಂ.98451 99931)ನ್ನು ಸಂಪರ್ಕಿಸಬಹುದು ಎಂದು ಸಂಚಾಲಕ ಯು.ಕೆ ಖಾಲಿದ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.