ಚತ್ತೀಸ್‌ಗಢದಲ್ಲಿ ಎನ್‌ಕೌಂಟರ್: ಶಂಕಿತ ನಕ್ಸಲೀಯನ ಹತ್ಯೆ

Update: 2020-11-08 17:33 GMT

ಬಿಜಾಪುರ, ನ. 8: ಚತ್ತೀಸ್‌ಗಡದ ಬಿಜಾಪುರದಲ್ಲಿ ರವಿವಾರ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಶಂಕಿತ ನಕ್ಸಲ್ ಹತನಾಗಿದ್ದಾನೆ. ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆಲಂಗಾಣದ ಗಡಿಯಲ್ಲಿ ಇರುವ ಪಾಮೇಡ್ ಪೊಲೀಸ್ ಠಾಣಾ ವ್ಯಾಪ್ತಿಯ ಭಟ್ಟಿಗುಡಾ ಗ್ರಾಮದಲ್ಲಿ ಬೆಳಗ್ಗೆ ಸುಮಾರು 10.30ಕ್ಕೆ ಎನ್‌ಕೌಂಟರ್ ನಡೆಯಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

‘‘ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ), ವಿಶೇಷ ಕ್ಷಿಪ್ರ ಕಾರ್ಯಪಡೆ (ಎಸ್‌ಟಿಎಫ್) ಹಾಗೂ ಸಿಆರ್‌ಪಿಎಫ್‌ನ ಕೋಬ್ರಾ ಸಿಬ್ಬಂದಿ ಚತ್ತೀಸ್‌ಗಡ ಹಾಗೂ ತೆಲಂಗಾಣ ಗಡಿಯಲ್ಲಿ ಶನಿವಾರ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಿದರು’’ ಎಂದು ಅವರು ತಿಳಿಸಿದ್ದಾರೆ.

 ‘‘ಗಸ್ತು ತಂಡ ಇಂದು ಬೆಳಗ್ಗೆ ಮಕ್ರಾಜಗಟ್ಟ ಬೆಟ್ಟದ ಅರಣ್ಯವನ್ನು ಸುತ್ತುವರಿದ ಸಂದರ್ಭ ಎನ್‌ಕೌಂಟರ್ ನಡೆಯಿತು. ಓರ್ವ ನಕ್ಸಲ್ ಹತನಾದ. ಎನ್‌ಕೌಂಟರ್ ನಡೆದ ಸ್ಥಳದಿಂದ ಭಾರೀ ಪ್ರಮಾಣದ ಸ್ಫೋಟಗಳು ಪತ್ತೆಯಾಗಿವೆ’’ ಎಂದು ಅವರು ತಿಳಿಸಿದ್ದಾರೆ. ಉಗ್ರರು ಹುದುಗಿರಿಸಿದ್ದ ಕಬ್ಬಿಣದ ಮುಳ್ಳಿನ ಬಲೆಯಲ್ಲಿ ಸಿಲುಕಿ ಜಿಲ್ಲಾ ಪೊಲೀಸ್ ಕಾನ್ಸ್‌ಟೆಬಲ್‌ಗಳಾದ ಸಂದೀಪ್ ಘೋಷ್ ಹಾಗೂ ಚಂದು ಕೊಡ್ಟಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News