×
Ad

ಮಂಜೇಶ್ವರ ಶಾಸಕ ಬಂಧನ : ಜಾಮೀನು ಕೋರಿ ಅರ್ಜಿ ವಿಚಾರಣೆ

Update: 2020-11-09 13:17 IST

ಕಾಸರಗೋಡು : ಫ್ಯಾಶನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿರುವ ಮಂಜೇಶ್ವರ ಶಾಸಕ ಎಂ. ಸಿ  ಕಮರುದ್ದೀನ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೊಸದುರ್ಗ ನ್ಯಾಯಾಲಯದಲ್ಲಿ ಆರಂಭಗೊಂಡಿದೆ. ಕಮರುದ್ದೀನ್ ಪರ  ಹಿರಿಯ ನ್ಯಾಯವಾದಿ  ಸಿ .ಕೆ  ಶ್ರೀಧರನ್ ಹಾಜರಾಗಿದ್ದಾರೆ.

ಈ ನಡುವೆ ಕಸ್ಟಡಿಗೆ  ಒಪ್ಪಿಸುವಂತೆ  ಕ್ರೈಂ  ಬ್ರಾಂಚ್  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಮಧ್ಯಾಹ್ನ 2.30 ಕಮರುದ್ದೀನ್ ನನ್ನು  ಹಾಜರುಪಡಿಸುವಂತೆ ನ್ಯಾಯಾಲಯ ತನಿಖಾ ತಂಡಕ್ಕೆ ತಿಳಿಸಿದೆ.

ಪ್ರಕರಣದ ಪ್ರಥಮ ಆರೋಪಿ ಟಿ. ಕೆ ಪೂಕೋಯ ನ್ಯಾಯಾಲಯಕ್ಕೆ ಶರಣಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ಈ ಹಿನ್ನೆಲೆಯಲ್ಲಿ  ನ್ಯಾಯಾಲಯ ಪರಿಸರದಲ್ಲಿ ಪೊಲೀಸರು ಬಂದೋ ಬಸ್ತ್  ಏರ್ಪಡಿಸಿದ್ದಾರೆ . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News