ಆಹಾರದ ಹಕ್ಕಿಗಾಗಿ, ವಧಾಗ್ರಹದ ನಿರ್ಮಾಣಕ್ಕಾಗಿ ದ.ಕ. ಜಿಲ್ಲಾಧಿಕಾರಿಗೆ ಮನವಿ
Update: 2020-11-09 15:23 IST
ಮಂಗಳೂರು : ಜನತೆಯ ಆಹಾರದ ಹಕ್ಕಿನ ಸಂರಕ್ಷಣೆಗಾಗಿ, ಸುಸಜ್ಜಿತ ಜಾನುವಾರು ವಧಾಗ್ರಹದ ನಿರ್ಮಾಣಕ್ಕಾಗಿ ಒತ್ತಾಯಿಸಿ ಆಹಾರದ ಹಕ್ಕು ಸಂರಕ್ಷಣಾ ಹೋರಾಟ ಸಮಿತಿಯ ನೇತ್ರತ್ವದಲ್ಲಿ ದ.ಕ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಲಾಯಿತು.
ನಿಯೋಗದಲ್ಲಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್, ಸಿಪಿಐಎಂ ಜಿಲ್ಲಾ ನಾಯಕರಾದ ವಾಸುದೇವ ಉಚ್ಚಿಲ್, ಜೆಡಿಎಸ್ ಜಿಲ್ಲಾ ನಾಯಕರಾದ ಸುಮತಿ ಎಸ್ ಹೆಗ್ಡೆ, ಕವಿತಾ, ಹರ್ಷಿತಾ, ಸಿಪಿಐ ಜಿಲ್ಲಾ ಮುಖಂಡರಾದ ವಿ.ಕುಕ್ಯಾನ್, ಕರುಣಾಕರ್, ಮಾನವ ಹಕ್ಕು ಹೋರಾಟಗಾರರಾದ ಕಬೀರ್ ಉಳ್ಳಾಲ, ದಲಿತ ಸಂಘಟನೆಯ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ವ್ಯಾಪಾರಸ್ಥರ ಸಂಘದ ಮುಖಂಡರಾದ ಆಲಿ ಹಸನ್, ಚೈಭಾವ, ಅಬ್ದುಲ್ ಖಾದರ್, ಮುಸ್ತಾಕ್ ಕದ್ರಿ ಉಪಸ್ಥಿತರಿದ್ದರು .