×
Ad

ಎಸ್ ವೈ ಎಸ್ ಕೆ ಸಿ ರೋಡ್ ವತಿಯಿಂದ ಡಾಕ್ಟರ್ ಗಳಿಗೆ ಗೌರವ ಸನ್ಮಾನ

Update: 2020-11-09 17:27 IST

ಉಳ್ಳಾಲ :  ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಕೆ ಸಿ ರೋಡ್ ಸೆಂಟರ್  ಇದರ ಸಾಂತ್ವನ ವಿಭಾಗದ ವತಿಯಿಂದ  ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ಸೇವೆಗೈದ ಡಾಕ್ಟರ್ ಗಳಿಗೆ ಗೌರವ ಸನ್ಮಾನವನ್ನು ನಡೆಸಲಾಯಿತು.

ಕೊರೋನ ಸಂದರ್ಭದಲ್ಲಿ ಜೀವದ ಹಂಗನ್ನು ತೊರೆದು ಮಾನವ ಸಮುದಾಯದ ಸೇವೆ ಗೈದ ಮಂಗಳೂರು ಗ್ರಾಮಾಂತರದ ವೈದ್ಯರುಗಳಾದ ಡಾ . ಮೊಹಮ್ಮದ್ ಅಶ್ರಫ್ , ಡಾ. ಸುನೀತಾ ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಬೋಳಿಯಾರ್ , ಡಾ . ತಾರಾನಾಥ ಶೆಟ್ಟಿ  ಬೀರಿ, ಡಾ. ಸುಜಯ್ ಪ್ರಭಾಕರ್ ನೇತಾಜಿ ಆಸ್ಪತ್ರೆ ತೊಕ್ಕೋಟು, ಡಾ.ಪರ್ಹೀನ್ ಯಾಸಿನ್ ಶೇಖ್, ಡಾ . ದಿವ್ಯಾ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಎಸ್ ವೈ ಎಸ್ ಕೆ.ಸಿ. ರೋಡ್ ಸೆಂಟರ್ ಅಧ್ಯಕ್ಷರಾದ  ಪಿ. ಮೊಹಮ್ಮದ್ , ಎಸ್.ವೈ.ಎಸ್ ಕನ್ವಿನರ್  ಮ್ಯಾರೇಜ್ ಸೆಲ್, ಎನ್. ಎಸ್. ಉಮರ್ ಮಾಸ್ಟರ್ ,  ಎಸ್. ವೈ .ಎಸ್  ಕೆ. ಸಿ ರೋಡ್ ಸೆಂಟರ್  ಉಪಾಧ್ಯಕ್ಷ ಇಬ್ರಾಹಿಂ. ಕೆ. ಸಿ. ರೋಡ್,  ಕೋಶಾಧಿಕಾರಿ, ಮೂಸ ಹಾಜಿ,  ಎಸ್ ವೈ ಎಸ್ ಕೆ ಸಿ ರೋಡ್ ಸೆಂಟರ್, ಸಾಂತ್ವನ ಕಾರ್ಯದರ್ಶಿ ಹಕೀಮ್ ಪೂಮಣ್ಣು, ವಕ್ಫ್ ಸಲಹಾ ಸಮಿತಿ ಸದಸ್ಯರಾದ ಕೆ.ಎ. ಉಸ್ಮಾನ್,  ಎಸ್ ವೈ ಎಸ್ ಕೆ ಸಿ ರೋಡ್ ಸೆಂಟರ್  ಕಾರ್ಯದರ್ಶಿ ಫಾರೂಕ್ ಎಂ, ವೈಸ್ ಚಯರ್ ಮ್ಯಾನ್  ಮ್ಯಾರೇಜ್ ಸೆಲ್ ಅಬ್ಬಾಸ್ ಹಾಜಿ ಕೆ. ಎಂ, ಮ್ಯಾರೇಜ್ ಸೆಲ್ ಅಬ್ಬಾಸ್ ಪೂಮಣ್ಣು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News