ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳವು

Update: 2020-11-09 15:50 GMT

ಮಲ್ಪೆ, ನ. 9: ಮನೆಯಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ಮಲ್ಪೆ ಬಾಪುತೋಟ ಎಂಬಲ್ಲಿ ನ.1ರಿಂದ ನ.7ರ ಮಧ್ಯಾವಧಿಯಲ್ಲಿ ನಡೆದಿದೆ.

ಬಾಪುತೋಟದ ಜಾನಕಿ ಎಂಬವರು ನ.1ರಂದು ಪಡುಕೆರೆಯಲ್ಲಿ ಕಾರ್ಯ ಕ್ರಮ ಮುಗಿಸಿ, 4 ಚಿನ್ನದ ಬಳೆ ಮತ್ತು ಚಿನ್ನದ ರೋಪ್ ಸರವನ್ನು ಮನೆಯಲ್ಲಿ ಇಟ್ಟಿದ್ದರು. ನ.7ರಂದು ಕಟೀಲು ದೇವಸ್ಥಾನಕ್ಕೆ ಹೋಗುವಾಗ ಗೊಡ್ರೇಜ್ನಲ್ಲಿಟ್ಟಿದ್ದ ಈ ಚಿನ್ನಾಭರಣಗಳು ಕಳವಾಗಿರುವುದು ತಿಳಿದುಬಂತು.

ಕಳವಾದ ಒಟ್ಟು 56 ಗ್ರಾಂ ಚಿನ್ನಾಭರಣಗಳ ಮೌಲ್ಯ 2.50 ಲಕ್ಷ ರೂ. ಅಂದಾಜಿಸಲಾಗಿದೆ. ಈ ಚಿನ್ನವನ್ನು ಮೊಮ್ಮಗ ಲಿಖಿತ್ ಯಾನೆ ಗುರು ಮತ್ತು ಆತನ ಸ್ನೇಹಿತರು ಕಳ್ಳತನ ಮಾಡಿರುವ ಬಗ್ಗೆ ಸಂಶಯವಿರುವುದಾಗಿ ಜಾನಕಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News