ನರಿಂಗಾನ: ಅಲ್ ಮದೀನದಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆ

Update: 2020-11-09 17:01 GMT

ನರಿಂಗಾನ :  ಪ್ರವಾದಿ ಮುಹಮ್ಮದ್ (ಸ.ಅ.) ರವರ ಜೀವನ, ಸಂದೇಶಗಳ ವಿಸ್ತೃತ ಅಧ್ಯಯನಕ್ಕಾಗಿ ಮರ್ಹೂಂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ (ನ.ಮ) ರವರ ಹೆಸರಿನಲ್ಲಿ ಪ್ರತ್ಯೇಕ ಕೇಂದ್ರವನ್ನು ತೆರೆಯಲಾಗುತ್ತಿದ್ದು ಇದರ  ಪೋಸ್ಟರನ್ನು ಬಿಡುಗಡೆಗೊಳಿಸುವ ಮೂಲಕ ಅಲ್ ಮದೀನದ ಅಧ್ಯಕ್ಷರೂ, ಇಂಡಿಯನ್ ಗ್ರಾಂಡ್ ಮುಫ್ತಿಯೂ ಆದ ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಈ ಯೋಜನೆಗೆ ಇತ್ತೀಚೆಗೆ ಚಾಲನೆ ನೀಡಿ ಶುಭ ಹಾರೈಸಿದರು.

ಕೇರಳದ ವಯನಾಡಿನ ನಾಲೆಜ್ ಸಿಟಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಲ್ ಮದೀನ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ, ಕೋಶಾಧಿಕಾರಿ ಮಜೀದ್ ಹಾಜಿ, ಮುಹಮ್ಮದ್ ಕುಂಞಿ ಅಮ್ಜದಿ, ಇಕ್ಬಾಲ್ ಮರ್ಝೂಖಿ ಉಪಸ್ಥಿತರಿದ್ದರು.

ಈ ಅಧ್ಯಯನ ಕೇಂದ್ರವು ಮರ್ಹೂಂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರವರ ಕನಸುಗಳಲ್ಲೊಂದಾಗಿದೆ. ಪ್ರವಾದಿ (ಸ)ರವರಿಗೆ ಸಂಬಂಧಪಟ್ಟ ವಿವಿಧ ಭಾಷೆಗಳ ಅಪೂರ್ವ ಗ್ರಂಥಗಳಿರುವ ವಿಶಾಲ ಗ್ರಂಥಾಲಯವನ್ನೊಳಗೊಂಡ ಕೇಂದ್ರ ಇದಾಗಿದ್ದು, ನುರಿತ ವಿದ್ವಾಂಸರ ಮಾರ್ಗದರ್ಶನದಲ್ಲಿ ಆಸಕ್ತರಿಗೆ  ಅಕಾಡೆಮಿಕ್ ಶೈಲಿಯಲ್ಲಿ ಉನ್ನತ ಅಧ್ಯಯನಕ್ಕೆ ಅವಕಾಶ ನೀಡಲಾಗುವುದು ಎಂದು ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News