ಕೋಳಿ ಸಾಕಾಣಿಕೆಗೆ ಎಂಎಸ್ ಧೋನಿ ಒಲವು

Update: 2020-11-13 18:36 GMT

ಭೋಪಾಲ್: ಎಲ್ಲ ಮಾದರಿಯ ಅಂತರ್‌ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿರುವ ಭಾರತದ ಮಾಜಿ ಕ್ರಿಕೆಟ್ ನಾಯಕ ಎಂಎಸ್ ಧೋನಿ ಕೋಳಿ ಸಾಕಾಣಿಕೆಯ ಉದ್ಯಮಕ್ಕೆ ಇಳಿಯಲು ಸಿದ್ದತೆ ನಡೆಸಿದ್ದಾರೆ. 2,000ದಷ್ಟು ಕಡಕ್‌ನಾಥ್ ತಳಿಯ ಕೋಳಿಗಳಿಗೆ ಆರ್ಡರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಡಕ್‌ನಾಥ್ ತಳಿ ಮೂಲತಃ ಮಧ್ಯಪ್ರದೇಶದ ಜಾಬುವಾ ಜಿಲ್ಲೆಯಲ್ಲಿದ್ದು, ಈ ತಳಿಯ ಕೋಳಿಗಳು ಶೀಘ್ರವೇ ರಾಂಚಿಯಲ್ಲಿರುವ ಧೋನಿಯವರ ಕೋಳಿ ಫಾರಮ್‌ಗೆ ತಲುಪಲಿವೆ.

  ಬುಡಕಟ್ಟು ಸಮುದಾಯದ ರೈತ ವಿನೋದ್ ಮೆಂಡಾ ಡಿಸೆಂಬರ್ 15ರಂದು ಧೋನಿಯ ಬೇಡಿಕೆಯ ಕೋಳಿಗಳನ್ನ್ನು ತಲುಪಿಸಲಿದ್ದಾರೆ. ಧೋನಿಯವರು ಮೊದಲಿಗೆ ತನ್ನ ಸ್ನೇಹಿತರ ಮೂಲಕ ತನ್ನನ್ನು ಸಂಪರ್ಕಿಸಿದ್ದರು. ತಾನು ಕೋಳಿಯನ್ನು ಸರಬರಾಜು ಮಾಡುವ ಸ್ಥಿತಿಯಲ್ಲಿಲ್ಲದ ಕಾರಣ ಥಂಡ್ಲಾದ ರೈತನನ್ನು ಸಂಪರ್ಕಿಸುವಂತೆ ತಿಳಿಸಿದ್ದೆ ಎಂದು ಕಡಕ್‌ನಾಥ್ ಮುರ್ಗಾ ಸಂಶೋಧನ ಕೇಂದ್ರದದ ನಿರ್ದೇಶಕ ಐ.ಎಸ್. ತೋಮರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News