×
Ad

ಪಕ್ಷ ಸಂಘಟನೆಯಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯ: ಸತೀಶ್ ಜಾರಕಿಹೊಳಿ

Update: 2020-11-14 19:11 IST

ಉಡುಪಿ, ನ.14: ನಮ್ಮ ಮುಂದೆ ಸಾಕಷ್ಟು ಸಮಸ್ಯೆಗಳು ಹಾಗೂ ಸವಾಲು ಗಳಿವೆ. ಇದನ್ನು ಎದುರಿಸಿಕೊಂಡು ಕಾರ್ಯಕರ್ತರು ಹೆಚ್ಚು ಹೆಚ್ಚು ಪಕ್ಷದಲ್ಲಿ ತೊಡಗಿಸಿಕೊಳ್ಳುವ ಮೂಲಕ ವ್ಯವಸ್ಥಿತವಾಗಿ ಪಕ್ಷ ಸಂಘಟಿಸಲು ಸಾಧ್ಯವಾಗು ತ್ತದೆ. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರ ಬಹುದಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಮತ್ತು ಮಾಜಿ ಪ್ರಧಾನಿ ನೆಹರು ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಂದಿನ ಗ್ರಾಪಂ, ಜಿಪಂ, ತಾಪಂ ಮತ್ತು 2023ರ ವಿಧಾನಸಭಾ ಚುನಾ ವಣೆಗೆ ಈಗಲೇ ತಯಾರಿ ಮಾಡುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಅದಕ್ಕಾಗಿ ಪಕ್ಷವನ್ನು ತಳ ಹಂತದಲ್ಲಿ ಗಟ್ಟಿಗೊಳಿಸಬೇಕು ಎಂದ ಅವರು, ಗಾಂಧಿ, ನೆಹರು, ಅಂಬೇಡ್ಕರ್, ಮೌಲಾನ ಆಝಾದ್‌ರಂತಹ ಮಹಾನ್ ವ್ಯಕ್ತಿಗಳ ವಿಚಾರಗಳು ಇಂದು ನಶಿಸಿ ಹೋಗುತ್ತಿವೆ. ಇವರ ಆದರ್ಶಗಳನ್ನು ಜಯಂತಿ ಆಚರಿಸುವ ಮೂಲಕ ಯುವ ಜನತೆಗೆ ತಲುಪಿಸಬೇಕು ಎಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾಂಗ್ರೆಸ್ ಸರಕಾರ ಸ್ಥಾಪಿಸಿದ ಮಂಗಳೂರು ವಿಮಾನ ನಿಲ್ದಾಣವನ್ನು ಗುಜರಾತ್ ಮಾದರಿ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಅದಾನಿಗೆ ಒಪ್ಪಿಸಿದ್ದಾರೆ. ವಿಜಯ ಬ್ಯಾಂಕ್‌ನ್ನು ವಿಲೀನ ಮಾಡುವ ಮೂಲಕ ಅದರ ಹೆಸರನ್ನೇ ಕೊನೆಗೊಳಿಸುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.

ಗ್ರಾಪಂ ಚುನಾವಣೆ ಬಹಳಷ್ಟು ಮಹತ್ತರವಾಗಿರುವ ಚುನಾವಣೆ. ಇದು ಕಾರ್ಯಕರ್ತರ ಚುನಾವಣೆಯಾಗಿದೆ. ಆದುದರಿಂದ ಕೊರೋನಾ ನಿರ್ವಹಣೆ ಯಲ್ಲಿ ಸರಕಾರದ ವೈಫಲ್ಯತೆಯನ್ನು ಜನರಿಗೆ ಅರ್ಥೈಸುವ ಕೆಲಸ ಮಾಡಬೇಕು. ಈಗಾಗಲೇ ನಾವು ಸನ್ನದ್ಧರಾಗುವುದರೊಂದಿಗೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ವನ್ನು ಗೆಲ್ಲಬಹುದಾಗಿದೆ ಎಂದರು.

ಗ್ರಾಪಂ ಚುನಾವಣೆ ಬಹಳಷ್ಟು ಮಹತ್ತರವಾಗಿರುವ ಚುನಾವಣೆ. ಇದು ಕಾರ್ಯಕರ್ತರ ಚುನಾವಣೆಯಾಗಿದೆ. ಆದುದರಿಂದ ಕೊರೋನಾ ನಿರ್ವಹಣೆ ಯಲ್ಲಿ ಸರಕಾರದ ವೈಫಲ್ಯತೆಯನ್ನು ಜನರಿಗೆ ಅರ್ಥೈಸುವ ಕೆಲಸ ಮಾಡಬೇಕು. ಈಗಾಗಲೇ ನಾವು ಸನ್ನದ್ಧರಾಗುವುದರೊಂದಿಗೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ವನ್ನು ಗೆಲ್ಲಬಹುದಾಗಿದೆ ಎಂದರು.

ವೇದಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೆಹರೋಸಾನ್, ಕೆಪಿಸಿಸಿ ಕಾರ್ಯದರ್ಶಿ ಸುನೀಲ್, ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಮುಖಂಡರಾದ ದಿನೇಶ್ ಪುತ್ರನ್, ಗೀತಾ ವಾಗ್ಳೆ, ರೋಶನಿ ಒಲಿವೇರಾ, ಯತೀಶ್ ಕರ್ಕೇರ, ಸೌರಭ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ರಾಜು ಪೂಜಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜ್ಯೋತಿ ಹೆಬ್ಬಾರ್ ವಂದಿಸಿದರು. ಪ್ರಧಾನ ಕಾರ್ಯ ದರ್ಶಿ ಅಣ್ಣಯ್ಯ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News