×
Ad

‘ಚೈಲ್ಡ್ ಲೈನ್ ಸೇ ದೋಸ್ತಿ ವೀಕ್’ ಕಾರ್ಯಕ್ರಮ

Update: 2020-11-14 20:32 IST

ಮಂಗಳೂರು, ನ.14: ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ವತಿಯಿಂದ ಚೈಲ್ಡ್ ಲೈನ್ ಸೇ ದೋಸ್ತಿ ವೀಕ್ ಕಾರ್ಯಕ್ರಮವು ಶನಿವಾರ ನಗರದ ರೋಶನಿ ನಿಲಯದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಿಳಾ ಠಾಣೆಯ ಎಸ್ಸೈ ರೇವತಿ ಮಕ್ಕಳಲ್ಲಿ ಭವಿಷ್ಯತ್ತಿನ ಕನಸನ್ನು ಪ್ರೇರೇಪಿಸುವ ಸಮಾಜ ನಿರ್ಮಾಣವಾಗಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚೈಲ್ಡ್‌ಲೈನ್ 1098 ನೋಡಲ್ ಸಂಸ್ಥೆಯ ನಿರ್ದೇಶಕಿ ಜ್ಯೂಲಿಯೆಟ್ 2019ರ ಎಪ್ರಿಲ್‌ನಿಂದ 2020ರ ಸೆಪ್ಟಂಬರ್‌ವರೆಗೆ 1,155 ಕರೆಗಳನ್ನು ಚೈಲ್ಡ್‌ಲೈನ್ ಮೂಲಕ ಸ್ವೀಕರಿಸಿ ಮಕ್ಕಳಿಗೆ ನೆರವು ನೀಡಲಾಗಿದೆ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗಟ್ರೂಡ್ ವೇಗಸ್ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಜ್ವಲ ಶೆಟ್ಟಿ, ಮಾತನಾಡಿದರು. ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ ‘ಚೈಲ್ಡ್ ಲೈನ್ ಸೇ ದೋಸ್ತಿ ವೀಕ್’ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಚೈಲ್ಡ್‌ಲೈನ್ ನಗರ ಸಂಯೋಜಕ ಸಿಸ್ಟರ್ ಹಿಲರಿಯಾ ಸ್ವಾಗತಿಸಿದರು. ಚೈಲ್ಡ್‌ಲೈನ್ ಆಪ್ತ ಸಮಾಲೋಚಕಿ ಶಖಿಲಾ ನರೇಶ್ ಮತ್ತು ಸಿಸ್ಟರ್ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ಜಯಂತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News