ಕೆರ್ಗಾಲ್: ನರೇಗಾ ಕೃಷಿ ಕೂಲಿಕಾರ್ಮಿಕರ ಸಮಾವೇಶ

Update: 2020-11-15 13:50 GMT

ಬೈಂದೂರು, ನ.15: ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ, ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಕೆರ್ಗಾಲ್ ಗ್ರಾಮದ ಮೊಗೇರಿ ಮತ್ತು ಮಟ್ನಕಟ್ಟೆ ಸಮಿತಿಗಳ ಸರ್ವ ಸದಸ್ಯರ ಸಭೆಯು ರವಿವಾರ ಸ್ಥಳೀಯ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ ರಾಜೀವ ಪಡು ಕೋಣೆ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ವಿವಿಧ ಸೌಲಭ್ಯ ಪಡೆಯುವುದಕ್ಕೆ ಸ್ಥಗಿತಗೊಳಿಸಿರುವ ಆನ್‌ಲೈನ್ ಅರ್ಜಿ ಸಲ್ಲಿಸುವ ಸೌಲಭ್ಯ ವನ್ನು ಸರಕಾರ ಕೂಡಲೇ ಪುನರಾರಂಭಿಸಬೇಕು ಎಂದು ಆಗ್ರಹಿಸಿದರು.

ನರೇಗಾ ಕೂಲಿಕಾರರು ಉದ್ಯೋಗ ಖಾತ್ರಿ ಯೋಜನೆಯಡಿ ಕೆರ್ಗಾಲ್ ಗ್ರಾಪಂ ಕಚೇರಿಗೆ ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿ ಎರಡು ತಿಂಗಳು ಕಳೆದರೂ ಕೆಲಸ ಕೊಡಲು ನಿರಾಕರಿಸಲಾಗುತ್ತಿದೆ. ಅಂತಹ ಅಧಿಕಾರಿಗಳ ವಿರುದ್ಧ ನ.26 ರಂದು ಬೈಂದೂರು ತಾಪಂ ಕಚೇರಿ ಎದುರು ಧರಣಿ ಮುಷ್ಕರ ಹಮ್ಮಿಕೊಳ್ಳ ಲಾಗುವುದು ಎಂದು ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಎಚ್ಚರಿಕೆ ನೀಡಿದರು.

ಸಿಐಟಿಯು ತಾಲೂಕು ಸಂಚಾಲಕ ಉದಯ ಗಾಣಿಗ ಮೊಗೇರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಮೊಗೇರಿ ಸಾಗತಿಸಿದರು. ಸಂತೋಷ ನಾಯ್ಕನಕಟ್ಟೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News