ಮಲ್ಪೆ ಬೀಚ್‌ನಲ್ಲಿ ರಾಜ್ಯದ ಪ್ರಥಮ ವಿಂಚ್ ಪ್ಯಾರಾಸೈಲಿಂಗ್‌ಗೆ ಚಾಲನೆ

Update: 2020-11-15 13:51 GMT

ಮಲ್ಪೆ, ನ.15: ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ವತಿಯಿಂದ ಸುಮಾರು ಒಂದು ಕೋಟಿ ರೂ. ವೆಚ್ಚದ, ಕರ್ನಾಟಕ ರಾಜ್ಯದ ಪ್ರಪ್ರಥಮ ವಿಂಚ್ ಪ್ಯಾರಸೈಲಿಂಗ್ ಬೋಟ್‌ಗೆ ಶನಿವಾರ ಮಲ್ಪೆ ಬೀಚ್‌ನಲ್ಲಿ ಶಾಸಕ ರಘುಪತಿ ಭಟ್ ಚಾಲನೆ ನೀಡಿದರು.

ಸ್ಥಳೀಯರ ಸಹಕಾರದಿಂದ ಮಲ್ಪೆ ಮತ್ತು ಪಡುಕರೆ ಬೀಚ್‌ನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಸುಂದರ ಬೀಚ್ ಆಗಿ ಅಭಿವೃದ್ದಿ ಪಡಿಸಲಾಗು ವುದು. ಕರಾವಳಿ ತೀರದ ಜನರಿಗೆ ತಮ್ಮ ಜಾಗದಲ್ಲಿ ಅಥವಾ ಮನೆಯ ಒಂದು ಭಾಗದಲ್ಲೇ ಹೋಂಸ್ಟೇ ಮಾಡಿ, ಪ್ರವಾಸಿಗರಿಗೆ ಉತ್ತಮ ಖಾದ್ಯಗಳನ್ನು ಒದಗಿಸುವ ಮೂಲಕ ತಮ್ಮ ಆದಾಯವನ್ನು ಹೆಚಿ್ಚಸಿಕೊಳ್ಳುವ ಅವಕಾಶವಿದೆ ಎಂದರು.

ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ.ಸುವರ್ಣ, ನಗರಸಭಾಧ್ಯಕ್ಷೆ ಸುಮಿತ್ರ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ತಾಪಂ ಉಪಾಧ್ಯಕ್ಷ ಶರತ್ ಕುಮಾರ್ ಬೈಲಕರೆ ಮುಖ್ಯ ಅತಿಥಿಗಳಾಗಿದ್ದರು.

ನಗರಸಭಾ ಸದಸ್ಯರಾದ ಎಡ್ಲಿನ್ ಕರ್ಕಡ, ವಿಜಯ ಕೊಡವೂರು, ಸುಂದರ್ ಜೆ.ಕಲ್ಮಾಡಿ, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷ ಮಂಜು ಕೊಳ, ಮಂತ್ರ ಟೂರಿಸಂ ಆಡಳಿತ ನಿರ್ದೇಶಕ ಸುದೇಶ್ ಶೆಟ್ಟಿ, ಮಾಜಿ ನಗರಸಭಾ ಸದಸ್ಯ ವಿಜಯ ಕುಂದರ್, ಜಿಲ್ಲಾ ಮೊಗವೀರ ಯುವ ಸಂಘಟನೆಯ ಮಾಜಿ ಅಧ್ಯಕ್ಷ ವಿನಯ ಕರ್ಕೇರ, ಜ್ಞಾನಜ್ಯೋತಿ ಭಜನಾ ಮಂದಿರದ ಅಧ್ಯಕ್ಷ ವಿಜಯ ತಿಂಗಳಾಯ ಮೊದಲಾದವರು ಉಪಸ್ಥಿತರಿದ್ದರು.

ಯತೀಶ್ ಸಾಲ್ಯಾನ್ ಮಟ್ಟು ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸೈಕ್ಲಿಂಗ್ ಟ್ರ್ಯಾಕ್ ನಿರ್ಮಾಣ

ಪಡುಕರೆಯನ್ನು ಮುಂದಿನ ಹಂತದಲ್ಲಿ ಇನ್ನಷ್ಟು ಅಭಿವೃದ್ದಿ ಪಡಿಸುವ ಉದ್ದೇಶದಿಂದ ಈಗಾಗಲೇ ಸಮುದ್ರ ತೀರದಲ್ಲಿ ಕಲ್ಲನ್ನು ಹಾಕಿ, ಸ್ಕೈವಾಕ್ ಮಾಡಲಾಗುವುದು. ಪಡುಕರೆ ಶನೀಶ್ವರ ಮಂದಿರದಿಂದ ಕುತ್ಪಾಡಿವರೆಗೆ ನದಿ ದಂಡೆಯಲ್ಲಿ ಸುಮಾರು 20 ಕೋಟಿ ರೂ. ವೆಚ್ಚದಲ್ಲಿ 30 ಅಡಿ ಅಗಲದಲ್ಲಿ 5.5 ಕಿ.ಮೀ ದೂರದ ವಾಕಿಂಗ್ ಮತ್ತು ಸೈಕ್ಲಿಂಗ್ ಟ್ರ್ಯಾಕ್ ನಿರ್ಮಾಣದ ಯೋಜನೆಗೆ ಮಂಜೂರಾತಿ ದೊರಕಿದೆ. ಡಿಸೆಂಬರ್‌ನಲ್ಲಿ ಇದರ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News