×
Ad

ನೆಹರೂ ಯುವ ಕೇಂದ್ರದ ಸಂಸ್ಥಾಪನಾ ದಿನಾಚರಣೆ

Update: 2020-11-15 20:17 IST

ಮಂಗಳೂರು, ನ.15: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ (ನೆಹರೂ ಯುವ ಕೇಂದ್ರ ಮಂಗಳೂರು) ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ನೆಹರೂ ಯುವ ಕೇಂದ್ರದ ಸಂಸ್ಥಾಪನಾ ದಿನಾಚರಣೆ ಹಾಗೂ ಜವಾಹರಲಾಲ್ ನೆಹರೂ ಜನ್ಮ ದಿನವನ್ನು ಶನಿವಾರ ನಗರದ ಎನ್‌ಜಿಒ ಹಾಲ್ ನಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಮಚಂದ್ರ ಬೈಕಂಪಾಡಿ ಮಾತನಾಡಿ ನೆಹರೂ ಯುವ ಕೇಂದ್ರ ಮಂಗಳೂರು ಜಿಲ್ಲೆಯ ಯುವಕ ಹಾಗೂ ಯುವತಿ ಮಂಡಲದ ಮೂಲಕ ಸಾಮಾಜಿಕ ಶೈಕ್ಷಣಿಕ ಹಾಗೂ ಅರೋಗ್ಯ ಪೂರ್ಣ ಸಮಾಜವನ್ನು ಕಟ್ಟುವಲ್ಲಿ ಅತ್ಯುತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಫಿಟ್ ಇಂಡಿಯಾ ಅಭಿಯಾನದ ಪ್ರಮುಖ ಪತ್ರವನ್ನು ಯುವಕ ಹಾಗೂ ಯುವತಿ ಮಂಡಳಿಗಳಿಗೆ ನೀಡಲಾಯಿತು.
ಕಾರ್ಪೊರೇಟರ್ ಅಬ್ದುಲ್ ಲತೀಫ್ ಹಾಗೂ ಶಂಶುದ್ದೀನ್ ಮತ್ತು ನೆಹರು ಯುವ ಕೇಂದ್ರ ಮಂಗಳೂರು ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಸೂಟರ್‌ಪೇಟೆ, ಜಗದೀಶ್ ಕೆ, ತಾಲೂಕು ಪ್ರತಿನಿಧಿಗಳಾದ ಪ್ರೀತೇಶ್ ಸೋನಾಲಿಕೆ, ಸುಶ್ಮಿತಾ ಬಿಆರ್ ಮೂಡುಬಿದಿರೆ, ಪ್ರಜ್ವಲ್ ಹಾಗೂ ಪುತ್ತೂರು ಯುವ ಜನ ಒಕ್ಕೂಟದ ಅಧ್ಯಕ್ಷ ಸುಬ್ರಮಣ್ಯ ಕರಂಬಾರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News