ವೈದ್ಯಕೀಯ ಕೋರ್ಸ್ ಗಳ ಶುಲ್ಕ ಹೆಚ್ಚಳ ಪ್ರಸ್ತಾಪ ಕೈ ಬಿಡುವಂತೆ ಮನವಿ

Update: 2020-11-15 15:32 GMT

ಮಂಗಳೂರು : ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಮತ್ತಿತರ ಕೋರ್ಸ್ ಗಳ ಪ್ರವೇಶಕ್ಕೆ ನೀಟ್ ಪರೀಕ್ಷೆ, ಆನ್ ಲೈನ್ ಕೌನ್ಸೆಲಿಂಗ್ ಮೂಲಕ ಸೀಟು ಹಂಚಿಕೆ ಮಾಡುವ ಪ್ರಕ್ರಿಯೆ ಹಾಗೂ ಪ್ರತೀ ವರ್ಷ ಬೇಕಾಬಿಟ್ಟಿ ಹೆಚ್ಚಾಗುತ್ತಿರುವ ಶುಲ್ಕಗಳಿಂದಾಗಿ ಈಗಾಗಲೇ ‌ವೈದ್ಯಕೀಯ ಶಿಕ್ಷಣವು ಉಳ್ಳವರ ಪಾಲಾಗುತ್ತಿದೆ.

2020-21ಸಾಲಿನ ವೈದ್ಯಕೀಯ ಕೋರ್ಸ್ ಗಳ ಸರಕಾರಿ ಮತ್ತು ಖಾಸಗಿ ಕೋಟಾದ ಶುಲ್ಕವನ್ನು 15% ಮತ್ತು 25% ಹೆಚ್ಚಿಸುವ ಪ್ರಸ್ತಾಪವು; ಕರ್ನಾಟಕ ರಾಜ್ಯ ಸರ್ಕಾರ ಉಳ್ಳವರ ಪರ ಎಂಬುದನ್ನು ಸಾಬೀತು ಪಡಿಸಿದಂತಾಗಿದೆ.

ಕೊರೋನ ಲಾಕ್ ಡೌನ್, ನಿರುದ್ಯೋಗ, ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಸಮಾಜದ ಕೆಳಸ್ತರ ಮತ್ತು ಮಧ್ಯಮ ವರ್ಗದ ಜನರಿಗೆ ಶುಲ್ಕ ಹೆಚ್ಚಳವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ವರ್ಷ ಶುಲ್ಕ ಹೆಚ್ಚಳದ ಪ್ರಸ್ತಾಪವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣ ಪ್ರವೇಶವನ್ನು ಸುಲಭಗೊಳಿಸಲು ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಮಂಗಳೂರಿನ ಕರಿಯರ್ ಗೈಡೆನ್ಸ್ ಆ್ಯಂಡ್ ಇನ್ಫೊರ್ಮೇಶನ್ ಸೆಂಟರ್ ನ ಅಧ್ಯಕ್ಷ ಉಮರ್ ಯು.ಹೆಚ್. ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News