ಬಿಎಸ್‌ಪಿಯ ಯುಪಿ ಘಟಕದ ಅಧ್ಯಕ್ಷರಾಗಿ ಭೀಮ್ ರಾಜ್‌ಭರ್
Update: 2020-11-15 21:10 IST
ಲಕ್ನೋ, ನ. 15: ತನ್ನ ಉತ್ತರಪ್ರದೇಶದ ಘಟಕದ ನೂತನ ಅಧ್ಯಕ್ಷರನ್ನಾಗಿ ಭೀಮ್ ರಾಜ್‌ಭರ್ ಅವರನ್ನು ಬಿಎಸ್‌ಪಿ ನಿಯೋಜಿಸಿದೆ. ರವಿವಾರ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಬಿಎಸ್‌ಪಿ ವರಿಷ್ಠೆ ಮಾಯಾವತಿ, ಪಕ್ಷದ ಹಾಗೂ ಹೋರಾಟದ ಹಳೆಯ ಹಾಗೂ ಶಿಸ್ತಿನ ಸಿಪಾಯಿಯಾಗಿರುವ, ಮಾವು ಜಿಲ್ಲೆ (ಅಝಮ್‌ಗಢ ವಿಭಾಗ)ಯ ನಿವಾಸಿ ಭೀಮ್ ರಾಜ್‌ಭರ್ ಅವರನ್ನು ಬಿಎಸ್‌ಪಿಯ ಉತ್ತರಪ್ರದೇಶ ಘಟಕಕ್ಕೆ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ. ಅವರಿಗೆ ಹಾರ್ದಿಕವಾಗಿ ಶುಭ ಕೋರುತ್ತಿದ್ದಾನೆ ಎಂದಿದ್ದಾರೆ.