ಶಬರಿಮಲೆ ದೇಗುಲ ಇಂದಿನಿಂದ ಭಕ್ತರಿಗೆ ಮುಕ್ತ

Update: 2020-11-16 04:23 GMT

ಶಬರಿಮಲೆ : ಎರಡು ತಿಂಗಳ ಅವಧಿಯ ಮಂಡಲ- ಮಕರವಿಳಕ್ಕು ಋತುವಿಗಾಗಿ ಶಬರಿಮಲೆ ಅಯ್ಯಪ್ಪ ದೇವಸ್ಥಾನವನ್ನು ರವಿವಾರ ತೆರೆಯಲಾಗಿದ್ದು, ಸೋಮವಾರ ಮುಂಜಾನೆಯಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಿರುತ್ತದೆ. ಕೋವಿಡ್-19 ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಆದರೆ ರವಿವಾರ ಯಾವುದೇ ವಿಶೇಷ ಪೂಜೆಗಳು ನಡೆಯಲಿಲ್ಲ. ಮೇಲ್ಸಾಂತಿ ಎ.ಕೆ.ಸುಧಾರ್ ನಂಬೂದಿರಿ ಸಂಜೆ 5ರ ಸುಮಾರಿಗೆ ತಂತ್ರಿ ಕಂದರೂರು ರಾಜೀವರು ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲು ತೆರೆದರು. ಈ ಮೂಲಕ 62 ದಿನಗಳ ಯಾತ್ರಾ ಋತು ಆರಂಭವಾಗಿದೆ.

ಹೊಸದಾಗಿ ಆಯ್ಕೆಯಾದ ಮೇಲ್ಸಾಂತಿ ವಿ.ಕೆ.ಜಯರಾಜ್ ಪೊಟ್ಟಿ ಮತ್ತು ಮಳಿಕ್ಕಾಪುರಂ ಮೇಲ್ಸಾಂತಿ ಎಂ.ಎನ್.ರಾಜ್‌ಕುಮಾರ್ ಅವರು ಪವಿತ್ರ 18 ಮೆಟ್ಟಲುಗಳನ್ನು ಏರಿ ಪ್ರಾರ್ಥನೆ ಸಲ್ಲಿಸಿದರು. ಸಂಜೆ ಅವರು ಅಧಿಕಾರ ಸ್ವೀಕರಿಸಿದರು. ಪ್ರತಿದಿನ 1000 ಮಂದಿಗೆ ದರ್ಶನಕ್ಕೆ ಅವಕಾಶವಿದ್ದು, ವರ್ಚುವಲ್ ಸರದಿ ವಿಧಾನದಲ್ಲಿ ಇದನ್ನು ಕಾಯ್ದಿರಿಸಬಹುದಾಗಿದೆ.

ನೀಲಕ್ಕಲ್ ಮತ್ತು ಪಾಂಬಾ ಬೇಸ್‌ಕ್ಯಾಂಪ್ ತಲುಪುವ 24 ಗಂಟೆ ಮೊದಲು ಈ ಯಾತ್ರಿಗಳು ಕೋವಿಡ್-19 ನೆಗೆಟಿವ್ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ. ಬೇಸ್‌ಕ್ಯಾಂಪ್‌ನಲ್ಲಿ ಭಕ್ತರ ತಪಾಸಣೆಗಾಗಿ ಕೋವಿಡ್-19 ಕಿಯೋಸ್ಕ್‌ಗಳನ್ನು ತೆರೆಯಲಾಗಿದೆ. ದೇಗುಲ ಆವರಣದಲ್ಲಿ ಉಳಿದುಕೊಳ್ಳಲು ಯಾತ್ರಿಗಳಿಗೆ ಅವಕಾಶ ಇರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News