ಕಾಸರಗೋಡು : ಸ್ನೇಹಿತರ ನಡುವೆ ವಾಗ್ವಾದ; ಓರ್ವನ ಕೊಲೆ

Update: 2020-11-16 06:20 GMT

ಕಾಸರಗೋಡು :  ತಿರುವನಂತಪುರ ನಿವಾಸಿಯೋರ್ವನನ್ನು ತಲೆಗೆ ಬಡಿದು ಕೊಲೆಗೈದ ಘಟನೆ ರವಿವಾರ ರಾತ್ರಿ ನಡೆದಿದೆ.

ಕೊಲೆಗೀಡಾದವರನ್ನು ತಿರುವನಂತಪುರದ ವಿಜಯನ್  ಮೇಸ್ತ್ರಿ ( 55) ಎಂದು ಗುರುತಿಸಲಾಗಿದೆ. ನಗರ ಹೊರವಲಯದ ಚೆಂಗಳ ಸಂತೋಷ್ ನಗರದ ಬಾಡಿಗೆ ಮನೆಯಲ್ಲಿ ಕೃತ್ಯ ನಡೆದಿದೆ. ಜೊತೆಗಿದ್ದ ತಮಿಳುನಾಡು ಮೂಲದ ಯುವಕನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ವಿಜಯನ್ ಹಾಗೂ ಸ್ನೇಹಿತನ ನಡುವೆ  ಉಂಟಾದ ವಾಗ್ವಾದ ಕೊಲೆಗೆ ಕಾರಣವೆನ್ನಲಾಗಿದೆ.

ಪಾನಮತ್ತನಾಗಿ ಈ ಕೃತ್ಯ ನಡೆಸಲಾಗಿದೆ ಎಂದು ತಿಳಿದುಬಂದಿದೆ. ವಿದ್ಯಾನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News