×
Ad

ಭಟ್ಕಳ: ನ.18 ರಂದು ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ

Update: 2020-11-16 16:11 IST

ಭಟ್ಕಳ : ಭಟ್ಕಳ ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಮುಹಮ್ಮದ್ ಪರ್ವೇಝ್ ಕಾಸಿಮಜಿ ಹಾಗೂ ಉಪಾಧ್ಯಕ್ಷ ಖೈಸರ್ ಮೊಹತೆಶಮ್‍ರನ್ನು ನ.18 ರಂದು ಕಾರಗದ್ದೆಯ ಹುರುಳಿಸಾಲ್ ಆಹಮದ್ ಸಯೀದ್ ಮಸೀದಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯಿಂದ ಸನ್ಮಾನಿಸಿ ಗೌರವಿಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂಜೆ 4-30ಕ್ಕೆ ನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಘಟಕದ ಅಧ್ಯಕ್ಷ ಇಂಜಿನೀಯರ್ ನಝೀರ್‍ ಆಹ್ಮದ್‍ ಖಾಝಿ, ಉಪಾಧ್ಯಕ್ಷ ಮುಜಾಹಿದ್ ಮುಸ್ತಫಾ, ಉ.ಕ ಜಿಲ್ಲಾ ಸಂಚಾಲಕ ಮುಹಮ್ಮದ್‍ ತಲ್ಹಾ ಸಿದ್ದಿಬಾಪ, ಇಸ್ಲಾಮಿಕ್ ವೆಲ್ಫೇರ್ ಸೂಸೈಟಿಯ ಅಧ್ಯಕ್ಷ ಕಾದಿರ್ ಮಿರಾ ಪಟೇಲ್, ದಾವಾ ಎಜ್ಯುಕೇಶನ್ ಮತ್ತು ಚಾರಿಟೆಬಲ್ ಸಂಸ್ಥೆಯ ಅಧ್ಯಕ್ಷ ಸೈಯ್ಯದ್ ಶಕೀಲ್‍ ಎಸ್.ಎಂ, ಮೌಲಾನ ಸೈಯ್ಯದ್‍ ಝುಬೇರ್ ಮಾರ್ಕೆಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News