×
Ad

ಆನ್​ಲೈನ್​ ಗೇಮ್ ಗಳಿಗೆ ಕಡಿವಾಣ ಹಾಕಿ: ದಿನೇಶ್ ಗುಂಡೂರಾವ್

Update: 2020-11-16 16:12 IST

ಬೆಂಗಳೂರು, ನ.16: ರಾಜ್ಯ ಸರಕಾರ ಆನ್​ಲೈನ್​ ಗೇಮ್ ಗಳಿಗೆ ಕಡಿವಾಣ ಹಾಕಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ಸೋಮವಾರ ಈ ಕುರಿತು ಟ್ವೀಟ್ ಮಾಡಿರುವ ಅವರು, ರಮ್ಮಿ, ಪೋಕರ್ ಸೇರಿ ಆನ್‌ಲೈನ್ ಗೇಮಿಂಗ್ ಎಂಬ ಜೂಜಿನ ವ್ಯಸನಕ್ಕೆ ಹಲವು ಯುವಕರು ಬಲಿಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ನಾನೂ ಕೂಡ ಹಲವು ಯುವಕರು ಈ ಆನ್‌ಲೈನ್ ಜೂಜಿನಲ್ಲಿ ವ್ಯಸನರಾಗಿರುವುದನ್ನು‌ ಗಮನಿಸಿದ್ದೇನೆ. ಇದರಿಂದ ಎಷ್ಟೋ ಕುಟುಂಬಗಳು ನಾಶವಾಗಿ ಹೋಗಿದೆ. ಹಾಗಾಗಿ ಇಂತಹ ಗೇಮ್‌ಗಳ ಮೇಲೆ ಕಡಿವಾಣ ಬೀಳಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News