ಕೊಂಕಣಿ ಪುಸ್ತಕ ’ಸೊಮ್ಯಾಚೆಂ ಯೆಣೆಂ ಕುರ್ಪೆ ದೆಣೆಂ’ ಬಿಡುಗಡೆ

Update: 2020-11-17 14:33 GMT

ಮಂಗಳೂರು, ನ.17: ನಗರ ಹೊರವಲಯದ ಕುಲಶೇಖರದ ಹೋಲಿ ಕ್ರಾಸ್ ಚರ್ಚ್‌ನ ಪ್ರಧಾನಗುರು ವಂ. ವಿಕ್ಟರ್ ಮಚಾದೊ ಅವರು ಕ್ರಿಸ್ಮಸ್ ಪ್ರಯುಕ್ತ ರಚಿಸಿದ ‘ಸೊಮ್ಯಾಚೆಂ ಯೆಣೆಂ ಕುರ್ಪೆ ದೆಣೆಂ’ ಕೊಂಕಣಿ ಪುಸ್ತಕವನ್ನು ಬಿಷಪ್ ಅತಿ ವಂ. ಪೀಟರ್ ಪಾವ್ಲ್ ಸಲ್ಡಾನ್ಹಾ ರವಿವಾರ ಕುಲಶೇಖರ ಚರ್ಚ್‌ನಲ್ಲಿ ಬಿಡುಗಡೆಗೊಳಿಸಿದರು.

ಸಂತ ಅಲೋಶಿಯಸ್ ಕಾಲೇಜಿನ ಪ್ರೊ.ಜಾನ್ ಡಿಸಿಲ್ವಾ, ರೋಶಿನಿ ನಿಲಯದ ಜಾನಿಸ್ ಮೇರಿ, ಸಿಟಿ ವಾರಾಡೊ ಕಾರ್ಯದರ್ಶಿ ಸಂತೋಷ್ ಡಿಕೊಸ್ತಾ, ಸಿಟಿ ವಲಯ ವ್ಯಾಪ್ತಿಯ ಧರ್ಮಗುರು ವಂ. ವಿಲಿಯಂ ಮೀನೇಜಸ್, ವಂ.ಆಂಡ್ರೂ ಲಿಯೋ ಡಿಸೋಜ, ವಂ. ಲೂಯಿಸ್ ಕುಟಿನ್ಹೊ, ವಂ. ಜೇಮ್ಸ್ ಡಿಸೋಜ, ವಂ. ಆಲ್ಬನ್ ಡಿಸೋಜ, ವಂ. ಜೋಸೆಫ್ ಮಸ್ಕರೇನ್ಹಸ್, ವಂ. ಜೆರಾಲ್ಡ್ ಡಿಸೋಜ, ವಂ. ಆಸ್ಟಿನ್ ಪೆರಿಸ್, ಧರ್ಮ ಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕ್ಯಾಸ್ಟಲಿನೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News