ಯುವಕ ನಾಪತ್ತೆ
Update: 2020-11-17 20:25 IST
ಮಂಗಳೂರು, ನ.17: ರಥಬೀದಿ ಸಮೀಪದ ತ್ರಿಶುಲೇಶ್ವರ ದೇವಸ್ಥಾನ ರಸ್ತೆಯ ವಿಜಯಲಕ್ಷ್ಮೀ ಗಾರ್ಡನ್ ನಿವಾಸಿ ಪ್ರಜ್ವಲ್ ನಾಯಕ್ (22) ಎಂಬಾತ ನ.16ರಿಂದ ನಾಪತ್ತೆಯಾಗಿದ್ದಾರೆ.
ಅಂದು ರಾತ್ರಿ 10:15ರ ವೇಳೆಗೆ ಸ್ಕೂಟರ್‌ನಲ್ಲಿ ಹೋದವರು ವಾಪಸ್ ಬಂದಿಲ್ಲ. ಅವರ ಪೋನ್ ಸ್ವಿಚ್ ಆಫ್ ಆಗಿದೆ ಎಂದು ಬಂದರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸುಮಾರು 5.7 ಅಡಿ ಎತ್ತರವಿರುವ, ಸಾಧಾರಣ ಶರೀರದ, ಗೋಧಿ ಮೈಬಣ್ಣದ, ಕಪ್ಪು ಕೂದಲಿನ, ದಪ್ಪ ಮೀಸೆಯ, ಕುರುಚಲು ಗಡ್ಡ ಹೊಂದಿದ ಪ್ರಜ್ವಲ್ ನಾಯಕ್ ನೀಲಿ ಬಣ್ಣದ ಟೀ ಶರ್ಟ್ ಹಾಗೂ ಖಾಕಿ ಬಣ್ಣದ ಕಾಟನ್ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಎಡಕೈಯಲ್ಲಿ ವಾಚ್ ಇತ್ತು. ಮಾಹಿತಿ ದೊರೆತವರು ಪೊಲೀಸ್ ಆಯುಕ್ತರ ಕಚೇರಿ(0824-2220801) ಅಥವಾ ಬಂದರ್ ಪೊಲೀಸ್ ಠಾಣೆ(0824-2220516)ಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.