×
Ad

​ಮಾದಕ ವಸ್ತು ಮಾರಾಟ: ಮೂವರ ಬಂಧನ

Update: 2020-11-17 20:49 IST

ಮಂಗಳೂರು, ನ.17: ನಗರದ ಬಲ್ಮಠ ಶಾಂತಿ ಚರ್ಚ್ ಮೈದಾನದ ಬಳಿ ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಪ್ರಯತ್ನಿ ಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನ.16ರಂದು ಮಧ್ಯಾಹ್ನ 1 ಗಂಟೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕದ್ರಿಯ ಅಬ್ದುಲ್ ಖಾದರ್ ಮತ್ತು ಮೂಡುಬಿದಿರೆಯ ಆಸ್ರಿತ್ ಶೆಟ್ಟಿ ಹಾಗೂ ಕಂಕನಾಡಿಯ ಅಹ್ಮದ್ ರಿಯಾಝ್‌ ಎಂಬವರನ್ನು ಬಂಧಿಸಿ 4.69 ಗ್ರಾಂ ಎಂಡಿಎಂ ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News