ನಾನು ಚುನಾವಣೆ ಗೆದ್ದಿದ್ದೇನೆ: ಟ್ರಂಪ್ ಪುನರುಚ್ಚಾರ

Update: 2020-11-17 15:47 GMT

ವಾಶಿಂಗ್ಟನ್, ನ. 17: ನವೆಂಬರ್ 3ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ವಿರುದ್ಧ ತಾನು ಸೋತಿದ್ದೇನೆ ಎನ್ನುವುದನ್ನು ಒಪ್ಪಿಕೊಳ್ಳಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಮತ್ತೊಮ್ಮೆ ನಿರಾಕರಿಸಿದ್ದಾರೆ.

‘‘ಈ ಚುನಾವಣೆಯನ್ನು ನಾನು ಗೆದ್ದಿದ್ದೇನೆ’’ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ಆದರೆ, ಚುನಾವಣೆ ಗೆಲ್ಲಲು ಅಗತ್ಯವಾದ 270 ಇಲೆಕ್ಟೋರೇಟ್ ಮತಗಳ ಗಡಿಯನ್ನು ಬೈಡನ್ ದಾಟಿದ್ದಾರೆ ಎಂಬುದಾಗಿ ಅಮೆರಿಕದ ಮಾಧ್ಯಮಗಳು ಈಗಾಗಲೇ ಬಿಂಬಿಸಿವೆ.

ಅದೇ ವೇಳೆ, ಟ್ರಂಪ್‌ರ ಈ ಟ್ವೀಟ್‌ಗೆ ಟ್ವಿಟ್ಟರ್ ಕಂಪೆನಿಯು ಈ ರೀತಿಯಾಗಿ ಟಿಪ್ಪಣಿ ಬರೆದಿದೆ: ‘‘ಈ ಚುನಾವಣೆಯ ಫಲಿತಾಂಶವನ್ನು ಒಂದಕ್ಕಿಂತ ಹೆಚ್ಚು ಮೂಲಗಳು ಭಿನ್ನವಾಗಿ ಬಿಂಬಿಸಿವೆ’’.

ಟ್ರಂಪ್‌ರ ಈ ಟ್ವೀಟ್‌ಗೆ ಜನರು ಕೂಡ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

‘‘ವೆಜ್ ಬಿರಿಯಾನಿ ಭಾರತದ ರಾಷ್ಟ್ರೀಯ ಆಹಾರ’’ ಎಂಬುದಾಗಿ ಆಹಾರ ಪೂರೈಕೆ ವೆಬ್‌ಸೈಟ್ ಸ್ವಿಗ್ಗಿ ಹೇಳಿದರೆ, ‘‘ನಾನು ಬಿಯಾನ್ಸ್ (ಅಮೆರಿಕದ ಪ್ರಸಿದ್ಧ ಹಾಡುಗಾರ್ತಿ)’’ ಎಂಬುದಾಗಿ ಲೇಖಕ ಬಾರಿ ಎ. ವಿಲಿಯಮ್ಸ್ ಬರೆದಿದ್ದಾರೆ.

ಭಾರತದ ಕಾಂಗ್ರೆಸ್ ಪಕ್ಷದ ನಾಯಕ ಸರಳ್ ಪಟೇಲ್, ‘‘ನಾನು ಕೇಂಬ್ರಿಜ್ ಡ್ಯೂಕ್ (ದೊರೆ)’’ ಎಂಬುದಾಗಿ ಘೋಷಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News