ಕೆಮ್ಮಾರ: ಟೀಮ್ ಬಿ-ಹ್ಯೂಮನ್ ವತಿಯಿಂದ ಬಡಕುಟುಂಬಗಳಿಗೆ ವಸ್ತ್ರ ವಿತರಣೆ

Update: 2020-11-19 08:03 GMT

ಪುತ್ತೂರು : ಟೀಮ್ ಬಿ- ಹ್ಯೂಮನ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಮತ್ತು ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯ ಸಹಕಾರದಿಂದ ಸ್ಥಳೀಯ ಅರ್ಹ ಬಡಕುಟುಂಬಗಳಿಗೆ ಹೊಸದಾದ ಉಡುಪುಗಳ ಉಚಿತ ವಿತರಣಾ ಕಾರ್ಯಕ್ರಮ ಮಂಗಳವಾರ ಕೆಮ್ಮಾರ ಶಂಸುಲ್ ಉಲಮಾ ಶರೀಅತ್ ಕಾಲೇಜ್‌ನಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಟೀಮ್ ಬಿ-ಹ್ಯೂಮನ್ ಸಂಸ್ಥೆಯ ಪದಾಧಿಕಾರಿಯಾದ ಇಮ್ತಿಯಾಝ್ ಪಾರ್ಲೆ ಮಾತನಾಡಿ, ನಮ್ಮ ಸಂಸ್ಥೆಯು ಪುತ್ತೂರು ಸುಳ್ಯ ಭಾಗದ ಹಲವಾರು ಬಡಕುಟುಂಬಗಳಿಗೆ ನಿರಂತರ ಬೇರೆಬೇರೆ ಕಾರ್ಯಕ್ರಮಗಳ ಮೂಲಕ ಬಡವರ ಸೇವೆಗೈಯುತ್ತಾ ಬಂದಿದ್ದು, ಅದೇ ರೀತಿ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯ ಸಾಮಾಜಿಕ ಸೇವೆಯನ್ನು ಗಮನಿಸುತ್ತಾ ಬಂದಿದ್ದೇವೆ. ಅವರ ಸಹಕಾರದಿಂದ ಇಲ್ಲಿನ ಗಂಡಿಬಾಗಿಲು, ಕೊಯಿಲ, ಕೆಮ್ಮಾರ ಭಾಗದ ತೀರ ಬಡಕುಟುಂಬವನ್ನು ಆಯ್ಕೆ ಮಾಡಿ ಹೊಸ ಉಡುಪುಗಳನ್ನು ವಿತರಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸುಮಾರು ಮೂವತ್ತರಷ್ಟು ಬಡಕುಟುಂಬಗಳ ಮಹಿಳೆಯರು, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಹಲವಾರು ಬಗೆಯ ಪ್ಯಾನ್ಸಿ ಮತ್ತು ದಿನಬಳಕೆಯ ಹೊಸ ಬಟ್ಟೆಬರೆಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಅಝೀಝ್ ಬಿ.ಕೆ., ಸಾಮಾಜಿಕ ಹೋರಾಟಗಾರ ಹುಸೈನ್ ಬಡಿಲ, ಶರೀಅತ್ ಕಾಲೇಜ್ ಅಧ್ಯಕ್ಷರಾದ ಇಸಾಕ್ ಎನ್.‌ಎ., ಖಲಂದರ್ ಎಸ್.‌ಪಿ., ಝುಬೈರ್ ಕೆ.ಟಿ.ಸಿ., ಅಥಾವುಲ್ಲಾ ಕೆಮ್ಮಾರ, ಅಡ್ವಕೇಟ್ ಕಬೀರ್ ಕೆಮ್ಮಾರ, ಮುಝಮ್ಮಿಲ್ ಚಾಯಿಸ್, ಅನ್ಸಾರ್, ಹಾಸಿರ್ ಕರಾಯ, ರಾಶಿಮ್, ಸಜ್ಜಾದ್ ಶಾ ಆತೂರು, ಬಾಶಿತ್ ಅಲಿ, ಮುಸ್ತಫ ಬೆಂಗಳೂರು, ಸಮದ್ ಕೆಮ್ಮಾರ, ಜಮಾಲ್ ಎಸ್‌.ಪಿ., ಜಲೀಲ್ ಎನ್.‌ಎ., ಶೌಕತ್ ಜೇಡರಪೇಟೆ, ಶಂಸುದ್ದೀನ್ ಅಳಕೆ, ಜಮಾಲ್ ಎನ್‌.ಎ., ಫೈಝಲ್ ಅಳಕೆ ಹೀಗೆ ಹಲವರು ಉಪಸ್ಥಿತರಿದ್ದರು.

ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಗಫ್ಪಾರ್ ಕೆಮ್ಮಾರ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News