ಕಾಪು ಕಾಲೇಜು: ನೆಗೆಟಿವ್ ವರದಿ ಇಲ್ಲದೆ ಬಂದ ವಿದ್ಯಾರ್ಥಿಗಳು

Update: 2020-11-17 16:35 GMT

ಕಾಪು : ಕೋವಿಡ್-19 ನೆಗೆಟಿವ್ ವರದಿ ಹಾಗೂ ಪಾಲಕರ ಅನುಮತಿ ಪತ್ರವಿಲ್ಲದೆ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಗಳಿಗೆ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶ ನಿರಾಕರಿಸಲಾಯಿತು.

ಕಾಪುವಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷ ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ಒಟ್ಟು 130 ವಿದ್ಯಾರ್ಥಿಗಳಿಗೆ ಮಂಗಳವಾರ ತರಗತಿ ಆರಂಭವಾಗ ಬೇಕಿತ್ತು.  15 ವಿದ್ಯಾರ್ಥಿ ಗಳಷ್ಟೇ ಕಾಲೇಜಿಗೆ ಆಗಮಿಸಿದ್ದರು. ಕಾಲೇಜಿಗೆ ಬಂದಿದ್ದ ಯಾರೊಬ್ಬರಲ್ಲಿಯೂ ಕೊರೋನ ನೆಗೆಟಿವ್ ವರದಿ ಹಾಗೂ ಪಾಲಕರ ಅನುಮತಿ ಪತ್ರವಿರಲಿಲ್ಲದ ಕಾರಣ ಪ್ರಾಂಶುಪಾಲ ಡಾ. ಅನಿಲ್ ಕುಮಾರ್, ಅವರನ್ನು ಕಾಲೇಜು ಪ್ರವೇಶಿಸಲು ಅನುಮತಿ ನಿರಾಕರಿಸಿದರು. ಪರಿಣಾಮ ಕೆಲ ವಿದ್ಯಾರ್ಥಿಗಳು ಸ್ಥಳೀಯ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ತೆರಳಿ ಕರೋನ ತಪಾಸಣೆ ಒಳಪಟ್ಟರು.

ಈ ಬಗ್ಗೆ ಮಾತನಾಡಿದ ಅನಿಲ್ ಕುಮಾರ್, ಕಾಲೇಜು ಶಿಕ್ಷಣ ಮಂಡಳಿ ಜಂಟಿ ನಿರ್ದೇಶಕರು ತಪಾಸಣೆ ಮಾಡಿಸಿದ ಕರೋನ ನೆಗೆಟಿವ್ ವರದಿ ಇಲ್ಲದೆ ಯಾವುದೇ ವಿದ್ಯಾರ್ಥಿ, ಉಪನ್ಯಾಸಕರು ಹಾಗೂ ಸಿಬ್ಬಂದಿ ಕಾಲೇಜು ಪ್ರವೇಶಿಸದಂತೆ ಆದೇಸಿಸಿದ್ದಾರೆ. ಅವರ ಆದೇಶವನ್ನು ಪಾಲಿಸಲಾಗುತ್ತಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ಅನಾನುಕೂಲವಾದರೂ ಆನ್‍ಲೈನ್ ತರಗತಿ ಮುಂದುವರಿಯಲಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News