ಭಟ್ಕಳ: ಡಯಾಲಿಸಿಸ್ ನೂತನ ಕಟ್ಟಡ ಉದ್ಘಾಟನೆ

Update: 2020-11-17 16:38 GMT

ಭಟ್ಕಳ :  ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ  ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ  ಡಯಾಲಿಸಿಸ್ ನೂತನ ಕಟ್ಟಡವನ್ನು  ಶಾಸಕ ಸುನಿಲ್ ನಾಯ್ಕ್ ಮಂಗಳವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡಕ್ಕೆ ದಾನಿಗಳು ಸಹಕರಿಸಿದ್ದು, ತಮ್ಮ ಹೆಸರನ್ನು ಹೇಳಬಯಸದೆ ಆಸ್ಪತ್ರೆಗೆ ದಾನ ನೀಡಿದ ದಾನಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು. ಸಂಪೂರ್ಣ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ನೀಲನಕ್ಷೆ ಸಿದ್ಧವಾಗಿದ್ದು ಶೀಘ್ರದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲು ಮತ್ತು ಆಸ್ಪತ್ರೆಯು ಮೇಲ್ದರ್ಜೆಗೆ ಏರಿಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಸ್ಪತ್ರೆಗೆ 3 ಅಂಬುಲೆನ್ಸ್ ಖರೀದಿಗೆ ಈಗಾಗಲೇ ಅನುದಾನವನ್ನು ನೀಡಿದ್ದು ಇನ್ನು ಕೆಲವೇ ದಿನಗಳಲ್ಲಿ ನೂತನ 3 ಅಂಬುಲೆನ್ಸ್ ಗಳು ತಮ್ಮ ಸೇವೆಯನ್ನು ಆರಂಭಿಸಲಿವೆ ಎಂದ ಅವರು,  ಆಸ್ಪತ್ರೆಯಲ್ಲಿ ಈಗಾಗಲೇ ತಾಯಿ ಮತ್ತು ಮಕ್ಕಳ ವಿಶೇಷ ಆರೈಕೆ ವಿಭಾಗ ಮತ್ತು  ಜನನ ವಿಶೇಷ ಆರೈಕೆ ಘಟಕವನ್ನು ಮಂಜೂರುಗೊಂಡಿದ್ದು ಶೀಘ್ರದಲ್ಲಿ ಸೇವೆಯನ್ನು ಪ್ರಾರಂಭಿಸಲಿದೆ ಎಂದರು.

ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಭರತ್ ಎಸ್, ಎ.ಎಸ್.ಪಿ ನಿಖಿಲ್ ಬಿ, ಪುರಸಭಾಧ್ಯಕ್ಷ ಮುಹಮ್ಮದ್ ಪರ್ವೇಝ್ ಕಾಸಿಮಜಿ, ತಾಲುಕಾಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಜಾಲಿ ಪ.ಪಂ ಅಧ್ಯಕ್ಷೆ ಶಮೀಮ್ ಬಾನು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News