×
Ad

ಉಳ್ಳಾಲ : ಬುಸ್ತಾನುಲ್ ಉಲೂಮ್ ಮದರಸ ವತಿಯಿಂದ ಬುಯ್ಯ ಮಕ್ಕಳ ಹಬ್ಬ

Update: 2020-11-17 22:15 IST

ಉಳ್ಳಾಲ: ಬುಸ್ತಾನುಲ್ ಉಲೂಮ್ ಯೂತ್ ಅಸ್ಸೋಷಿಯೇಷನ್ ಮತ್ತು ಬುಸ್ತಾನುಲ್ ಉಲೂಮ್ ಮದರಸ ಪೇಟೆ ಉಳ್ಳಾಲ ಇದರ ವತಿಯಿಂದ  ಬುಯ್ಯ ಮಕ್ಕಳ ಹಬ್ಬ ಕಾರ್ಯಕ್ರಮ ರವಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷ ವಹಿಸಿಕೊಂಡ ರಹ್ಮಾನಿಯ ಮಸೀದಿ ಪೇಟೆ ಅಧ್ಯಕ್ಷ ಮೊಹಿದ್ದೀನ್ ಹಾಜಿ ಮಾತನಾಡಿ ಮಕ್ಕಳಿಗೆ ಕೆಲವು ಸಲಹೆಗಳನ್ನು ನೀಡಿದರು. ಪೇಟೆ ಮಸೀದಿಯ ಇಮಾಮ್ ಲತೀಫ್ ಮದನಿ ದುವಾ ನೆರೆವರಿಸಿದರು,

ಬುಯ್ಯ ರಸಪ್ರಶ್ನೆ, ಪ್ರಬಂಧ, ಕಿರಾಅತ್ ಮತ್ತು ಕ್ಯಾಲಿಗ್ರಾಫಿ  ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪೇಟೆ ಮಸೀದಿಯ ಕಾರ್ಯದರ್ಶಿ ಮುಸ್ತಫಾ ಅಹ್ಮದ್, ಫಾರೂಕ್ ಬುಸ್ತಾನುಲ್ ಉಲೂಮ್ ಮದರಸ ಸದ್ರ್ ಶರೀಫ್ ಮದನಿ, ಮುಹಲ್ಲಿಮ್ ನಾಸೀರ್ ಮುಸ್ಲಿಯಾರ್, ಬುಸ್ತಾನುಲ್ ಉಲೂಮ್ ಯೂತ್ ಅಸ್ಸೋಷಿಯೇಷನ್ ಅಧ್ಯಕ್ಷ ತೌಸೀಫ್, ಕಾರ್ಯದರ್ಶಿ ಅಝೀಮ್, ಖಾಜಂಜಿ ಆಫ್ರಿದ್ ಕೊಟ್ಟಾರ, ಸದಸ್ಯ ಶರಾಫತ್ ಬಸ್ತಿಪಡ್ಪು, ಇರ್ಫಾನ್, ಝೈದ್ ಸಲೀಮ್, ಸರ್ಫ್ರಾಝ್ ಮತ್ತು ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.

ಸದಸ್ಯ ಸೀನಾನ್ ಕೊಟ್ಟಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News