ಸುರತ್ಕಲ್ : ಮಹಿಳೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಹೂವಿನ ವ್ಯಾಪಾರಿ
Update: 2020-11-18 16:23 IST
ಮಂಗಳೂರು, ನ.18: ಹೂವಿನ ವ್ಯಾಪಾರಿಯೊಬ್ಬ ಮಹಿಳೆಯೋರ್ವರನ್ನು ಕೊಂದ ಬಳಿಕ ತಾನೂ ಅತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಘಟನೆ ಸುರತ್ಕಲ್ ನಲ್ಲಿ ಬುಧವಾರ ನಡೆದಿದೆ.
ಕುಳಾಯಿಯ ವಸಂತ್ (44) ದುಷ್ಕೃತ್ಯ ಎಸಗಿದ ಆರೋಪಿ ಎಂದು ತಿಳಿದುಬಂದಿದೆ. ಈತ ಏಳೆಂಟು ವರ್ಷಗಳಿಂದ ಹೂವು ವ್ಯಾಪಾರ ಮಾಡುತ್ತಿದ್ದು, ಈತನ ಅಂಗಡಿಗೆ ಹೂವು ಕೊಳ್ಳಲು ಬರುತ್ತಿದ್ದ ಸೂರಿಂಜೆಯ ವಿವಾಹಿತ ಮಹಿಳೆಯ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು. ಬುಧವಾರ ಯಾವುದೋ ವೈಮನಸ್ಸಿನಿಂದ ಮಹಿಳೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಎಸಿಪಿ ಬೆಳ್ಳಿಯಪ್ಪ, ಸುರತ್ಕಲ್ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.