ಅಪರಿಚಿತ ವ್ಯಕ್ತಿಯ ಶವ ಪತ್ತೆ
Update: 2020-11-18 18:56 IST
ಉಡುಪಿ, ನ.18: ಬ್ರಹ್ಮಾವರ ತಾಲೂಕು ಕುಮ್ರಗೋಡು ಗ್ರಾಮದ ಕುಮ್ರಗೋಡು ಮಾಬುಕಳ ಸೇತುವೆ ಸಮೀಪದ ಶೆಡ್‌ನಲ್ಲಿ ಸುಮಾರು 40 ರಿಂದ 45 ವರ್ಷ ಪ್ರಾಯದ ಗಂಡಸಿನ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತದೇಹವು ಸಂಪೂರ್ಣ ಕೊಳೆತು ಹೋಗಿರುವುದರಿಂದ ಮೃತದೇಹವನ್ನು ಪಂಚಾಯತ್ ವತಿಯಿಂದ ಶವ ಸಂಸ್ಕಾರ ಮಾಡಲಾಗಿದ್ದು, ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 0820-2561044, ಬ್ರಹ್ಮಾವರ ವೃತ್ತ ಕಚೇರಿ ದೂರವಾಣಿ ಸಂಖ್ಯೆ: 0820-2561966, ಕಂಟ್ರೋಲ್ ರೂಮ್ ನಂಬರ್ 0820- 2526444ಗೆ ಮಾಹಿತಿ ನೀಡುವಂತೆ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.