ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ತುರ್ತು ಸೇವೆ, ಒಳರೋಗಿಗಳ ಸೇವೆ ಪುನರಾರಂಭ
ಉಡುಪಿ, ನ.18: ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಕಳೆದ ಸೋಮವಾರದಿಂದ (ನ.16) ಈ ಹಿಂದೆ ಲಭ್ಯವಿದ್ದ ಎಲ್ಲಾ ಒಳರೋಗಿ ಸೇವೆ ಗಳು, ಶಸ್ತ್ರಚಿಕಿತ್ಸೆಗಳು ಮತ್ತು ಹೆರಿಗೆ ಸೌಲಭ್ಯಗಳು ಪುನರಾರಂಭಗೊಂಡಿವೆ. ತುರ್ತು ಸೇವೆಗಳು ಸಹಾ ಎಂದಿನಂತೆ ಕಾರ್ಯ ನಿರ್ವಹಿ ಸುತ್ತಿವೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಕಳೆದ ಎಪ್ರಿಲ್ ತಿಂಗಳಿನಿಂದ ಉಡುಪಿ ಜಿಲ್ಲೆಯ ಕೋವಿಡ್-19 ರೋಗಿಗಳ ನಿರ್ವಹಣೆಯಲ್ಲಿ ಆಸ್ಪತ್ರೆಯು ಪ್ರಮುಖ ಪಾತ್ರ ವಹಿಸಿದ ಕಾರಣ ದಿಂದ ಇತರ ಎಲ್ಲ ಸೇವೆಗಳನ್ನು ನಿಲ್ಲಿಸಲಾಗಿತ್ತು. ಮೊದಲ ಹಂತವಾಗಿ ಅ.1ರಿಂದ ಆಸ್ಪತ್ರೆಯಲ್ಲಿ ಹೊರರೋಗಿ ಸೇವೆಗಳನ್ನು ಪುನರಾರಂಭಿಸಲಾಗಿತ್ತು.
ಕೋವಿಡ್-19 ಸಾಂಕ್ರಾಮಿಕ ರೋಗದ ಆರಂಭಿಕ ಉಲ್ಬಣ ಈಗ ಕಡಿಮೆ ಯಾಗಿ ಕಾಣುತ್ತಿರುವುದರಿಂದ, ಎರಡನೇ ಹಂತದಲ್ಲಿ, ನವೆಂಬರ್ 16ರಿಂದ ತುರ್ತು ಸೇವೆಗಳು ಸೇರಿದಂತೆ ಉಳಿದ ಎಲ್ಲಾ ಸೇವೆಗಳು ಮತ್ತೆ ಹಿಂದಿನಂತೆ ಪ್ರಾರಂಭಗೊಂಡಿವೆ ಎಂದವರು ತಿಳಿಸಿದ್ದಾರೆ.
ಈ ಸಾಂಕ್ರಾಮಿಕ ರೋಗದ ಆರಂಭದಿಂದಲೂ ಆಸ್ಪತ್ರೆಯು ಕಟ್ಟುನಿಟ್ಟಾದ ಸೋಂಕು ನಿಯಂತ್ರಣ ಶಿಷ್ಟಾಚಾರಗಳನ್ನು ಅನುಸರಿಸುತ್ತಿದ್ದು, ಎಲ್ಲಾ ರೋಗಿಗಳ ಸುರಕ್ಷತೆಗಾಗಿ ಅಂತಹ ಸೋಂಕು ನಿಯಂತ್ರಣ ಅಭ್ಯಾಸಗಳನ್ನು ಮುಂದುವರಿ ಸಲಿದೆ ಎಂದು ಡಾ.ಶಶಿಕಿರಣ್ ಉಮಾಕಾಂತ್ ಹೇಳಿಕೆಯಲ್ಲಿ ವಿವರಿಸಿದ್ದಾರೆ.