ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್ ಕಡಿತಕ್ಕೆ ಎನ್‌ಎಸ್‌ಯುಐ ಖಂಡನೆ
Update: 2020-11-18 20:04 IST
ಮಂಗಳೂರು, ನ.18: ಪಿಎಚ್‌ಡಿ ಮತ್ತು ಎಂಪಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಪ್ ಮೊತ್ತ ವನ್ನು ರಾಜ್ಯ ಸರಕಾರ ಕಡಿತಗೊಳಿಸಿರುವುದನ್ನು ಎನ್‌ಎಸ್‌ಯುಐ ದ.ಕ.ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಖಂಡಿಸಿದ್ದಾರೆ.
ಪಿಎಚ್‌ಡಿ ಮಾಡುವವರಿಗೆ ಮೂರು ವರ್ಷ, ಎಂಫಿಲ್ ಮಾಡುವವರಿಗೆ ಎರಡು ವರ್ಷ ಮಾಸಿಕ 25,000 ರೂ.ವನ್ನು ನೀಡಲಾಗುತ್ತಿದ್ದು, ಕಳೆದ ಹತ್ತು ತಿಂಗಳಿನಿಂದ ಈ ಮೊತ್ತವನ್ನು ಪಾವತಿಸದೆ ಇದೀಗ ಕಡಿತಗೊಳಿಸಿರುವುದಾಗಿ ತಿಳಿಸಿರುವುದು ಅಮಾನವೀಯ, ಕೊರೋನ ಸಂದರ್ಭ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಲವಾರು ವಿದ್ಯಾರ್ಥಿಗಳಿಗೆ ಸಮಸ್ಯೆಯನ್ನು ಉಂಟು ಮಾಡಿದ ಸರಕಾರ ತಕ್ಷಣ ಈ ಆದೇಶವನ್ನು ಹಿಂಪಡೆಯ ಬೇಕಯ ಎಂದು ಒತ್ತಾಯಿಸಿದ್ದಾರೆ.