ಜಮ್ಮು-ಕಾಶ್ಮೀರ: ಗ್ರೆನೇಡ್ ದಾಳಿಗೆ 12 ಜನರಿಗೆ ಗಾಯ
Update: 2020-11-18 20:14 IST
ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಬುಧವಾರ ಉಗ್ರಗಾಮಿಗಳು ನಡೆಸಿರುವ ಗ್ರೆನೇಡ್ ದಾಳಿಗೆ ಕನಿಷ್ಠ 12 ನಾಗರಿಕರಿಗೆ ಗಾಯವಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರ ಗುಂಪು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಯನ್ನು ಗುರಿಯಾಗಿಸಿ ದಾಳಿ ನಡೆಸಲು ಯತ್ನಿಸಿ ವಿಫಲವಾಯಿತು. ಘಟನೆಯಲ್ಲಿ ಯಾವುದೇ ಸಿಬ್ಬಂದಿಗೆ ಗಾಯವಾಗಿಲ್ಲ. ಆದರೆ, ಉಗ್ರರ ಗುಂಪು ಸಂಜೆ 6:17ರ ಸುಮಾರಿಗೆ ಜನನಿಬಿಡ ಪುಲ್ವಾಮದ ಕಕಾಪೋರ ಚೌಕದ ಸಮೀಪ ಗ್ರೆನೇಡ್ ದಾಳಿ ನಡೆಸಿದ್ದರಿಂದ 12 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.