ಮಳಲಿ : ಎಸ್‌ವೈಎಸ್ ಲೀಡರ್ಸ್ ಮೀಟ್

Update: 2020-11-18 15:18 GMT

ಗುರುಪುರ, ನ.18: ಎಸ್‌ವೈಎಸ್ ಮಳಲಿ ಶಾಖೆಯ ವತಿಯಿಂದ ಲೀಡರ್ಸ್ ಮೀಟ್ ಕಾರ್ಯಕ್ರಮವು ಮಳಲಿ ಅಸೈಯದ್ ಅಬ್ದುಲ್ಲಾಹಿಲ್ ಮದನಿ (ಖ) ದರ್ಗಾ ಝಿಯಾರತ್‌ನೊಂದಿಗೆ ದರ್ಗಾ ಹಾಲ್ ನಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಎಸ್‌ವೈಎಸ್ ಗುರುಪುರ ವಲಯ ಅಧ್ಯಕ್ಷ ಎಂಜಿ ಶಾಹುಲ್ ಹಮೀದ್ ವಹಿಸಿ ಮಾತನಾಡಿದರು. ಗುರುಪುರ ವಲಯ ಕೋಶಾಧಿಕಾರಿ ಎಂಎಚ್ ಮುಹಿಯುದ್ದೀನ್ ಹಾಜಿ ಮಾತನಾಡಿದರು. ಎಸ್‌ವೈಎಸ್ ಗುರುಪುರ ವಲಯ ಕಾರ್ಯದರ್ಶಿ ಎಂಎ ಅಬ್ದುರ್ರಶೀದ್ ‘ಪ್ರಸಕ್ತ ಸನ್ನಿವೇಶದಲ್ಲಿ ಸಮಸ್ತ ಮತ್ತು ಎಸ್‌ವೈಎಸ್’ ಎಂಬ ವಿಷಯದಲ್ಲಿ ಮಾತನಾಡಿದರು.

ಎಸ್‌ವೈಎಸ್ ಮಳಲಿ ಶಾಖೆಯ ಅಧ್ಯಕ್ಷ ಎಂಎ ಅಬೂಬಕ್ಕರ್ ಸ್ವಾಗತಿಸಿದರು. ನೌಶಾದ್ ಹಾಜಿ, ವಲಯ ವರ್ಕಿಂಗ್ ಕಾರ್ಯದರ್ಶಿ ಮುಹಮ್ಮದ್ ಬಶೀರ್, ತ್ವಯಿಬಾ ಶಾಖೆ ಕಾರ್ಯದರ್ಶಿಗಳಾದ ಕೆ. ಅಬ್ದುಲ್ ಹಮೀದ್, ಕೋಶಾಧಿಕಾರಿ ಎಂಕೆ ಹಂಝ, ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಕೈಕಂಬ, ಸುಲೈಮಾನ್, ಅಬ್ದುಲ್ ಖಾದರ್, ಅಝೀಝ್, ಎಂ. ಅಬ್ದುಲ್ ರಝಾಕ್, ಟಿಎಂ ನಿಸಾರ್, ಎಂ. ಅಬ್ದುಲ್ ಹಮೀದ್,ಬಿಎ ರಫೀಕ್ ಕಾಂಜಿಲಕೋಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News