ಮುಸ್ಲಿಂ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ರಾಜ್ಯ ಸರಕಾರಕ್ಕೆ 'ಯುನಿವೆಫ್ ಕರ್ನಾಟಕ' ಆಗ್ರಹ

Update: 2020-11-18 16:00 GMT

ಮಂಗಳೂರು : ತಕ್ಷಣದಿಂದಲೇ ಜಾರಿಗೆ ಬರುವಂತೆ ವೀರಶೈವ ಲಿಂಗಾಯತರ ಅಭಿವೃದ್ಧಿ ನಿಗಮದ ಸ್ಥಾಪನೆಗೆ ನಮ್ಮ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಆದೇಶಿಸಿದ್ದಾರೆ. ಆ ಕೂಡಲೇ ಒಕ್ಕಲಿಗ ನಿಗಮವನ್ನೂ ಸ್ಥಾಪಿಸಬೇಕೆಂದು ಮುಖ್ಯಮಂತ್ರಿಗಳ  ರಾಜಕೀಯ ಕಾರ್ಯದರ್ಶಿ ಗಳಾದ ಎಸ್.ಆರ್ ವಿಶ್ವನಾಥ್ ಆಗ್ರಹಿಸಿದ್ದಾರೆ. ಈಗಾಗಲೇ ಅಲ್ಪಸಂಖ್ಯಾತ ವಿಭಾಗಕ್ಕೆ ಸೇರಿರುವ ಸಮುದಾಯಗಳಾದ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಮತ್ತು ಮರಾಠ ಅಭಿವೃದ್ಧಿ ನಿಗಮ ಸ್ಥಾಪಿತಗೊಂಡಿವೆ.

ಯಾವುದೇ ನಿರ್ದಿಷ್ಟ  ಸಮುದಾಯದ ಅಭಿವೃದ್ಧಿಗಾಗಿ ನಿಗಮ ಮಂಡಳಿಯನ್ನು ಸ್ಥಾಪಿಸುವುದು ಸ್ವಾಗತಾರ್ಹವಾಗಿದೆ. ಆದರೆ ಈ ದೇಶದ ಅತಿದೊಡ್ಡ ಅಲ್ಪಸಂಖ್ಯಾತರಾಗಿರುವ ಮುಸಲ್ಮಾನರು ಎಲ್ಲ ರಂಗಗಳಲ್ಲೂ ಹಿಂದುಳಿದಿದ್ದಾರೆ.  ರಾಜಕೀಯವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಅವರನ್ನು ಮೇಲೆತ್ತ ಬೇಕಾದಂತಹ ಹೊಣೆಗಾರಿಕೆ ಪ್ರತಿ ರಾಜ್ಯ ಸರಕಾರಗಳ ಮೇಲೆ ಇದೆ.  ಹೀಗಿರುವಾಗ ಆದಷ್ಟು ಬೇಗ ಮುಸ್ಲಿಂ ಅಭಿವೃದ್ಧಿ ನಿಗಮವನ್ನು ನಮ್ಮ ಮುಖ್ಯಮಂತ್ರಿಗಳು ಸ್ಥಾಪಿಸಬೇಕೆಂದು ಯುನಿವೆಫ್ ಕರ್ನಾಟಕ ಸರಕಾರವನ್ನು ಆಗ್ರಹಿಸಿದೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾತಿಯಾಧಾರಿತ ಅಂಕಿ-ಅಂಶಗಳನ್ನು ಸಂಗ್ರಹಿಸಿದ್ದರು .ಅದರಂತೆ ರಾಜ್ಯದಲ್ಲಿ ಸುಮಾರು 80 ಲಕ್ಷದಷ್ಟು ಅಂದರೆ ರಾಜ್ಯದ  ಶೇ16  ರಕ್ಕಿಂತಲೂ  ಹೆಚ್ಚು ಜನರು ಮುಸ್ಲಿಮರು ಮತ್ತು ದಲಿತರ ಬಳಿಕ ಅತಿಹೆಚ್ಚು ಜನಸಂಖ್ಯೆಯಲ್ಲಿ ರಾಜ್ಯದಲ್ಲಿದ್ದಾರೆ. ಅದು ಕೂಡ ಎಲ್ಲ ರಂಗಗಳಲ್ಲೂ ಹಿಂದುಳಿದವರು.
ಅಲ್ಪಸಂಖ್ಯಾತರಿಗಾಗಿ  ಬಜೆಟ್ನಲ್ಲಿ ಮೀಸಲಿಟ್ಟಂತಹ  ಹಣವು ಮುಸ್ಲಿಮರಿಗೆ ಎಷ್ಟು ಎಂಬುದು  ನಿಖರವಾಗಿಲ್ಲ.  ಮತ್ತು ಈ ತನಕ ಬಜೆಟ್ ಆಧಾರಿತವಾಗಿ ಸಮುದಾಯ ಅಭಿವೃದ್ಧಿಗೊಳ್ಳದಿರುವ ಕಾರಣ ಮುಸಲ್ಮಾನರಿಗೆ ಪ್ರತ್ಯೇಕವಾದಂತಹ ಪ್ರಾಧಿಕಾರವನ್ನು ಅಥವಾ ನಿಗಮವನ್ನು ರಚಿಸಲೇಬೇಕೆಂದು ಯುನಿವೆಫ್ ಕರ್ನಾಟಕ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ.

ಈ ಕುರಿತು ಮಾತನಾಡಲು ಮುಖ್ಯಮಂತ್ರಿಗಳ ಜೊತೆ ನಿಯೋಗವನ್ನು ಭೇಟಿ ಮಾಡುವ ತೀರ್ಮಾನವನ್ನೂ ಯುನಿವೆಫ್ ಕರ್ನಾಟಕ ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News