ತಾಜುಲ್ ಉಲಮಾ ಜಾಲತಾಣಕ್ಕೆ ಚಾಲನೆ

Update: 2020-11-18 16:36 GMT

ಮಂಗಳೂರು, ನ.18: ಉಳ್ಳಾಲ ತಂಙಳ್ ಎಂದೇ ಪ್ರಸಿದ್ಧರಾದ ಹಿರಿಯ ವಿದ್ವಾಂಸ ಮರ್ಹೂಮ್ ಶೈಖುನಾ ತಾಜುಲ್ ಉಲಮಾ ಅಸೈಯದ್ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್ ಅಲ್-ಬುಖಾರಿ ಅವರ ಸೇವೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ತಯಾರಿಸಲಾದ ತಾಜುಲ್ಉಲಮಾ.ಕಾಮ್ (tajululama.com) ಜಾಲತಾಣವನ್ನು ಉಳ್ಳಾಲ ತಂಙಳ್‌ರ ಪುತ್ರ ಖಾಝಿ ಅಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್-ಬುಖಾರಿ ಚಾಲನೆ ನೀಡಿದರು.

ಈ ಸಂದರ್ಭ ಅಸೈಯದ್ ಜಲಾಲುದ್ದೀನ್ ತಂಙಳ್ ಅಲ್-ಹಾದಿ ಉಜಿರೆ, ಹಮೀದ್ ಅಹ್ಸನಿ ಎಟ್ಟಿಕ್ಕುಳಂ, ಯು.ಕೆ. ನಿಝಾಮುದ್ದೀನ್ ಶಾ ಉಪಸ್ಥಿತರಿದ್ದರು.

ಉಳ್ಳಾಲ ಮೇಲಂಗಡಿ ತಾಜುಲ್ ಉಲಮಾ ಸುನ್ನಿ ಸೆಂಟರ್‌ನಲ್ಲಿ ನಡೆದ ತಾಜುಲ್ ಉಲಮಾ 7ನೇ ವಾರ್ಷಿಕ ಉರೂಸ್ ಕಾರ್ಯಕ್ರಮದಲ್ಲಿ ತಾಜುಲ್ ಉಲಮಾ.ಕಾಮ್ ಜಾಲತಾಣವನ್ನು ಸೈಯದ್ ಮದನಿ ಅರಬಿಕ್ ಕಾಲೇಜಿನ ಪ್ರಾಚಾರ್ಯರಾಗಿದ್ದ ಅಬ್ದರ್ರಶೀದ್ ಮದನಿ ಲೋಕಾರ್ಪಣೆಗೈದರು. ತಾಜುಲ್ ಉಲಮಾರಿಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನು ಸಂಗ್ರಹಿಸಲು ಸಲುವಾಗಿ ವರ್ಚುವಲ್ ಅಭಿಯಾನಕ್ಕೆ ಸೈಯದ್ ಮದನಿ ಮೊಹಲ್ಲಾ ಒಕ್ಕೂಟದ ಅಧ್ಯಕ್ಷ ಪಿ.ಎಸ್. ಶಿಹಾಬುದ್ದೀನ್ ಸಖಾಫಿ ಚಾಲನೆ ನೀಡಿದರು.

ಸುನ್ನಿ ಯುವಜನ ಸಂಘ ಉಳ್ಳಾಲ ಸೆಂಟರ್ ಗೌರವಾಧ್ಯಕ್ಷ ಸೈಯದ್ ಜಲಾಲ್ ತಂಙಳ್ ಅಳೇಕಲ, ಕರ್ನಾಟಕ ಮುಸ್ಲಿಂ ಜಮಾಅತ್ ಉಳ್ಳಾಲ ತಾಲೂಕು ಕೋಶಾಧಿಕಾರಿ ಬಿ.ಜೆ. ಹನೀಫ್ ಹಾಜಿ, ಎಸ್ಸೆಸ್ಸೆಫ್ ದ.ಕ. ಜಿಲ್ಲಾ ನಾಯಕರಾದ ಸೈಯದ್ ಖುಬೈಬ್ ತಂಙಳ್, ತಾಜುಲ್ ಉಲಮಾ ಉರೂಸ್ ಸಮಿತಿಯ ಜಮಾಲುದ್ದೀನ್ ಮುಸ್ಲಿಯಾರ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಹಂಝ ಸುಂದರ್ ಭಾಗ್, ಸುನ್ನಿ ಯುವಜನ ಸಂಘ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಸಖಾಫಿ ಮೇಲಂಗಡಿ, ತಾಜುಲ್ ಉಲಮಾ ಮೆಮೋರಿಯಲ್ ರಿಲೀಫ್ ಸಮಿತಿಯ ಫಾರೂಕ್ ಹಾಜಿ ಮಲಾಝ್, ಹಾಫಿಝ್ ಮುಈನುದ್ದೀನ್ ರಝಾ ಅಮ್ಜದಿ, ಮುಸ್ತಫಾ ಮದನಿ, ಅಯ್ಯೂಬ್ ಮಹ್ಳರಿ ಮದನಿನಗರ, ರಿಲ್ವಾನ್ ಶಾ, ಮುಹಮ್ಮದ್ ಸಲ್ಮಾನ್, ಹಾಫಿಝ್ ಉವೈಸ್ ಹಿಶಾಮಿ ಕೊಟೇಪುರ, ಇಸಾಕ್ ಹಾಜಿ ಬಸ್ತಿಪಡ್ಪುಉಪಸ್ಥಿತರಿದ್ದರು. ಖಾದರ್ ಜೀಲಾನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News