ಇರಾಕ್: ಅಮೆರಿಕ ರಾಯಭಾರ ಕಚೇರಿ ಗುರಿಯಾಗಿಸಿ ರಾಕೆಟ್ ದಾಳಿ
Update: 2020-11-18 23:40 IST
ಬಗ್ದಾದ್ (ಇರಾಕ್), ನ. 17: ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿರುವ ಅವೆುರಿಕ ರಾಯಭಾರ ಕಚೇರಿಯನ್ನು ಗುರಿಯಾಗಿಸಿ ಮಂಗಳವಾರ ರಾತ್ರಿ ಸರಣಿ ರಾಕೆಟ್ ದಾಳಿಗಳನ್ನು ನಡೆಸಲಾಗಿದೆ. ದಾಳಿಯಲ್ಲಿ ಓರ್ವ ಬಾಲಕಿ ಮೃತಪಟ್ಟಿದ್ದಾಳೆ.
ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿರುವ ತನ್ನ ಸೈನಿಕರ ಸಂಖ್ಯೆಯನ್ನು ಇಳಿಸುವುದಾಗಿ ಅಮೆರಿಕ ಘೋಷಿಸಿದ ಬಳಿಕ ದಾಳಿಗಳು ನಡೆದಿವೆ.
ಉಡಾಯಿಸಲ್ಪಟ್ಟ ರಾಕೆಟ್‌ಗಳ ಪೈಕಿ ನಾಲ್ಕು ರಾಕೆಟ್‌ಗಳು ರಾಜಧಾನಿಯ ಅತಿ ಭದ್ರತೆಯ ಹಸಿರು ವಲಯದಲ್ಲಿ ಅಪ್ಪಳಿಸಿವೆ. ಈ ವಲಯದಲ್ಲಿ ಅಮೆರಿಕ ಸೇರಿದಂತೆ ಹಲವಾರು ವಿದೇಶಿ ರಾಯಭಾರ ಕಚೇರಿಗಳಿವೆ.
ಇತರ ಮೂರು ರಾಕೆಟ್‌ಗಳು ಬಗ್ದಾದ್‌ನ ಇತರ ಭಾಗಗಳಿಗೆ ಅಪ್ಪಳಿಸಿದ್ದು, ಓರ್ವ ಬಾಲಕಿ ಮೃತಪಟ್ಟಿದ್ದಾಳೆ ಹಾಗೂ ಐವರು ನಾಗರಿಕರು ಗಾಯಗೊಂಡಿದ್ದಾರೆ.