×
Ad

ಪರ್ಲಡ್ಕ: ಶಂಸುಲ್ ಉಲಮಾ ಮೆಮೋರಿಯಲ್ ಶರೀಅತ್ ಕಾಲೇಜು ಪದವಿ ಪ್ರದಾನ ಸಮಾರಂಭ ಸಮಾರೋಪ

Update: 2020-11-19 15:39 IST

ಪುತ್ತೂರು, ನ.19: ಪರ್ಲಡ್ಕ ಶಂಸುಲ್ ಉಲಮಾ ಮೆಮೋರಿಯಲ್ ವುಮೆನ್ಸ್ ಶರೀಅತ್ ಕಾಲೇಜಿನ ಐದನೇ ವಾರ್ಷಿಕ ಹಾಗೂ ಎರಡನೇ ಪದವಿ ಪ್ರದಾನ ಸಮಾರಂಭ ಇತ್ತೀಚೆಗೆ ಪರ್ಲಡ್ಕ ಕಾಲೇಜು ಹಾಲ್ ನಲ್ಲಿ ನಡೆಯಿತು.

ಅಸ್ಸೈಯದ್ ಹಾದಿ ತಂಙಳ್ ಅಲ್ ಮಶ್ಹೂರ್ ಮೊಗ್ರಾಲ್  ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ ಉದ್ಘಾಟಿಸಿದರು. ಸಮಸ್ತ ಶಿಕ್ಷಣ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್ ಝಾಹಿರ ಪದವಿ ಪಡೆದ 68 ವಿದ್ಯಾರ್ಥಿನಿಯರ ಪೋಷಕರಿಗೆ ಪದವಿ ಪತ್ರ ಪ್ರದಾನಗೈದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜು ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಹಂಝ ಹಾಜಿ, ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎರಡು ವರ್ಷಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಇಂದು ತಲಾ ಹತ್ತು ಗ್ರಾಂ ಚಿನ್ನವನ್ನು ಬಹುಮಾನವಾಗಿ ವಿತರಿಸಲಾಗಿದೆ. ಮಾತ್ರವಲ್ಲದೆ ಮುಂದಿನ ಅಧ್ಯಯನ ವರ್ಷದಿಂದ ಶರೀಅತ್ ಕಲಿಯಲಿಚ್ಛಿಸುವ ಎಲ್ಲ ವಿದ್ಯಾರ್ಥಿನಿಯರಿಗೆ ಉಚಿತವಾಗಿ ವಿದ್ಯಾಭ್ಯಾಸ ನೀಡಲಾಗುವುದೆಂದು ಘೋಷಿಸಿದರು.

ಮುಂದಿನ ಅಧ್ಯಯನ ವರ್ಷದಿಂದ ಶಂಸುಲ್ ಉಲಮಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾಗಿ ಅಬೂಬಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಅಬೂಬಕರ್ ಸಿದ್ದೀಕ್ ಜಲಾಲಿ, ಖತೀಬ್ ಅಬ್ದುರ್ರಶೀದ್ ರಹ್ಮಾನಿ ಸಾಂದರ್ಭಿಕವಾಗಿ ಮಾತನಾಡಿದರು.

ಕಾಲೇಜು ಸಮಿತಿಯ ಉಪಾಧ್ಯಕ್ಷ ಉಮರ್ ದಾರಿಮಿ  ಸಾಲ್ಮರ ಸ್ವಾಗತಿಸಿದರು. ಜಮಾಅತ್ ಅಧ್ಯಕ್ಷ ಅಬ್ದುರ್ರಝಾಕ್ ಹಾಜಿ, ಉಪಾಧ್ಯಕ್ಷ ಇಬ್ರಾಹೀಂ ಗೋಳಿಕಟ್ಟೆ, ಕಾರ್ಯದರ್ಶಿ ಗಫೂರ್, ಕೋಶಾಧಿಕಾರಿ ಶಕೂರ್ ಹಾಜಿ, ರಾಜ್ಯ ಫೈಝೀಸ್ ಅಧ್ಯಕ್ಷ  ಉಸ್ಮಾನ್ ಫೈಝಿ ತೋಡಾರು, ಕಾಲೇಜು ಸಮಿತಿಯ ಅಧ್ಯಕ್ಷರಾದ ಅಬೂಬಕರ್, ಅಧ್ಯಾಪಕರಾದ ಜಲಾಲ್ ದಾರಿಮಿ, ಯೂಸುಫ್ ಫೈಝಿ, ಹನೀಫ್ ಮುಸ್ಲಿಯಾರ್, ಉಸ್ಮಾನ್ ಮುಸ್ಲಿಯಾರ್, ಜಮಾಅತ್ ಕಮಿಟಿ ಪದಾಧಿಕಾರಿಗಳು,ಕಾಲೇಜು ಸಮಿತಿ ಪದಾಧಿಕಾರಿಗಳು, ಯಂಗ್ ಮೆನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮೆನೇಜರ್ ಮುಸ್ತಫಾ ಫೈಝಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News